ಗುಬ್ಬಿ: ರಾಜ್ಯ ಸರ್ಕಾರವು ಶೈಕ್ಷಣಿಕ, ಆರ್ಥಿಕ ಸಾಮಾಜಿಕ ಗಣತಿ ಸಮೀಕ್ಷೆಯಲ್ಲಿ ಗುಬ್ಬಿ ತಾಲೂಕು ಶೇಕಡಾ 80ರಷ್ಟು ಗುರಿ ಸಾಧಿಸಿದೆ ಎಂದು ತಹಸೀಲ್ದಾರ್ ಬಿ.ಆರತಿ ತಿಳಿಸಿದ್ದಾರೆ.
ಪಟ್ಟಣದ ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಪಿಡಿಒ ಅಧಿಕಾರಿಗಳ ಸರ್ವೇ ಕಾರ್ಯ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ 83,333 ಮನೆಗಳಿದ್ದು, 65,171 ಮನೆಗಳಲ್ಲಿ ಗಣತಿ ಕಾರ್ಯ ಪೂರ್ಣಗೊಳಿಸಿದೆ. 18 ಸಾವಿರ ಮನೆಗಳು ಯುಎಚ್ಐಡಿ ಹೆಚ್ಚುವರಿ ಕ್ರಿಯೇಟ್ ಆಗಿದ್ದು, ಅವುಗಳನ್ನು ಡಿಲಿಟೇಷನ್ ಪ್ರಕ್ರಿಯೆ ಆರಂಭಿಸಲಾಗಿದೆ. ಡಿಲಿಟ್ ಆದರೆ ಶೇ.90ರಷ್ಟು ಗುರಿ ಸಾಧಿಸಿದಂತಾಗಲಿದೆ. ಉಳಿದ ಒಂದರಿಂದ ಒಂದೂವರೆ ಸಾವಿರ ಮನೆಗಳು ಬಾಕಿ ಇದ್ದು, ಅದನ್ನು ಪೂರ್ಣಗೊಳಿಸಲು ಗಣತಿದಾರರು ಹಾಗೂ ಮೇಲ್ವಿಚಾರಕರಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಪ್ರತಿನಿತ್ಯ 6,916 ಮನೆಗಳ ಗುರಿಯನ್ನು ಇಟ್ಟುಕೊಂಡು ಸಮೀಕ್ಷೆ ಕಾರ್ಯ ನಡೆಸಲಾಗಿದ್ದು, ಅದರಂತೆ ಗುರಿ ಸಾಧಿಸುತ್ತಾ ಬರಲಾಗಿದೆ. ಜಿಲ್ಲಾಧಿಕಾರಿಗಳು ಸೂಚನೆಯಂತೆ ಈಗಾಗಲೇ ಗಣತಿ ಕಾರ್ಯ ಮುಗಿದಿರುವ ಗ್ರಾಮಗಳಲ್ಲಿ ಪುನ@ ಪರಿಶೀಲನೆ ನಡೆಸಿ ಗ್ರಾಪಂ ಪಿಡಿಒ ಅಧಿಕಾರಿಗಳ ಸಭೆ ಕರೆದಿದ್ದು, ಪಪಂ, ಗ್ರಾಪಂ ವ್ಯಾಪ್ತಿಯಲ್ಲಿ ವಾಟರ್ಮನ್, ಅಂಗನವಾಡಿ ಕಾರ್ಯಕರ್ತೆಯರು ಸರ್ವೇ ಕಾರ್ಯ ನಡೆಸಿ ಯಾವುದಾದರೂ ಸರ್ವೇ ಕಾರ್ಯವು ಆಗದೇ ಇದ್ದಲ್ಲಿ ಅವುಗಳನ್ನು ಗುರುತಿಸಿ ಮಾಹಿತಿ ನೀಡಲು ಸೂಚಿಸಲಾಗಿದೆ ಎಂದರು.