ಜಿಲ್ಲೆ

80.1 ಕೆಜಿ ಗಾಂಜಾ ಜಪ್ತಿ

Raichur

ಅರಕೇರಾ: ಮಲ್ಲಾಪುರದಲ್ಲಿ ಗಾಂಜಾ ಬೆಳೆದಿದ್ದ ಆರೋಪಿಯನ್ನು ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ. ಹತ್ತಿ ಬೆಳೆ ನಡುವೆ ಗಾಂಜಾ ಬೆಳೆದಿರುವ ಮಾಹಿತಿ ಆಧರಿಸಿ, ತಹಸೀಲ್ದಾರ್ ಶ್ರೀನಿವಾಸ ಚಾಪೇಲ್ ಹಾಗೂ ಪಿಐ ಕೆ.ಹೊಸಕೇರಪ್ಪ ನೇತೃತ್ವದ ತಂಡ ದಾಳಿ ನಡೆಸಿತು. ಅಂದಾಜು 10 ಲಕ್ಷ ರೂ. ಮೌಲ್ಯದ 80.1 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಆರೋಪಿ ನರಸಪ್ಪನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.