ಚಾಮರಾಜನಗರ: ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಹಣಕಾಸು ಅವ್ಯವಹಾರ ಪ್ರಕರಣದ 8 ಜನ ಆರೋಪಿಗಳಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳವಾರ ಜಾಮೀನು ನಿರಾಕರಿಸಿದೆ.
ಪ್ರಕರಣದ ಆರೋಪಿಗಳಾದ ಎಸ್.ಮಹದೇವಯ್ಯ, ಜಿ.ವಿ.ವೆಂಕಟೇಶ್, ಬಿ.ನಾಗರಾಜು, ಕೆ.ನಾಗರಾಜು, ಎಂ.ಸಿ.ಮಲ್ಲದೇವರು, ಕೆ.ಕಾಂತರಾಜು, ಪ್ರಕಾಶ್, ಎ.ಎಸ್.ಮಲ್ಲಣ್ಣ ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಧೀಶೆ ಪ್ರಭಾವತಿ ವಜಾಗೊಳಿಸಿದ್ದಾರೆ.
ಏನಿದು ಪ್ರಕರಣ:? ತಾಲೂಕು ಆದಿಕರ್ನಾಟಕ ಅಭಿವೃದ್ಧಿ ಸಂಘದ 23 ಪದಾಧಿಕಾರಿಗಳ ವಿರುದ್ಧ ಸಂಘದ ನಿರ್ಗಮಿತ ಆಡಳಿತಾಧಿಕಾರಿ ಮತ್ತು ಕೊಳ್ಳೇಗಾಲ ಉಪವಿಭಾಗಾಧಿಕಾರಿ ಮಹೇಶ್ ಕಳೆದ ತಿಂಗಳು ದೂರು ನೀಡಿದ್ದರು. ಈ ಸಂಬಂಧ ಪೊಲೀಸರು ಎ್ಐಆರ್ ದಾಖಲಿಸಿದ್ದರು. ಬಳಿಕ ನಂಜುಂಡಸ್ವಾಮಿ, ಕೆಂಪಯ್ಯ, ಮಾದಯ್ಯ, ಹನುಮಯ್ಯ, ಮಲ್ಲಿಕಾರ್ಜುನ, ಮಲ್ಲೇದೇವರು, ಪುಟ್ಟಸ್ವಾಮಿ, ರಾಜ್‌ಗೋಪಾಲ್, ಪುಟ್ಟಸ್ವಾಮಿ, ಲಕ್ಷ್ಮಿನರಸಿಂಹ, ಬಸವರಾಜು, ಎಂ.ಬಸವರಾಜು, ಮಹದೇವಯ್ಯ, ಕಾಂತರಾಜು, ರಂಗಯ್ಯ, ಪ್ರಕಾಶ್, ವೆಂಕಟೇಶ, ನಾಗರಾಜು, ನಂಜಯ್ಯ, ಕೆ.ನಾಗರಾಜು, ಮಲ್ಲಯ್ಯ, ರವಿಕುಮಾರ್, ಪಾರ್ವತಮ್ಮ ವಿರುದ್ಧ ಎ್ಐಆರ್ ದಾಖಲಾಗಿತ್ತು. ಎ್ಐಆರ್ ದಾಖಲಾಗಿರುವ 23 ಪದಾಧಿಕಾರಿಗಳು ಅಪರಾಧಿಕ ನಂಬಿಕೆ ದ್ರೋಹ ಮತ್ತು ವಂಚನೆ ಮಾಡಿದ್ದಾರೆ. ಆದ್ದರಿಂದ ಇವರ ಮೇಲೆ ಕ್ರಮವಹಿಸಬೇಕೆಂದು ದೂರು ನೀಡಲಾಗಿತ್ತು.