ತೆಲಸಂಗ: ಗ್ರಾಮದಲ್ಲಿ ಬಾಲಕಿ ಸೇರಿ 8 ಜನರ ಮೇಲೆ ಹುಚ್ಚು ನಾಯಿಯೊಂದು ಶುಕ್ರವಾರ ದಾಳಿ ಮಾಡಿ ಕಚ್ಚಿ ಗಾಯಗೊಳಿಸಿದ್ದು, ಕಡಿತಕ್ಕೊಳಗಾದವರು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಒಂದೇ ನಾಯಿ 8 ಜನರಿಗೆ ಕಚ್ಚಿದೆ.
ದಾಳಿ ಮಾಡಿರುವ ನಾಯಿ ನೋಡಲು ಸಾಕು ನಾಯಿಯಂತೆ ಕಂಡಿದ್ದರಿಂದ ಗ್ರಾಮಸ್ಥರಿಗೆ ಅದು ಹುಚ್ಚು ನಾಯಿಯೆಂದು ಗುರುತಿಸಲು ಆಗಿರಲಿಲ್ಲ.
ಬಳಿಕ ನಾಯಿ ದಾಳಿ ಇನ್ನೂ ಹೆಚ್ಚಬಹುದೆಂಬ ಭೀತಿಯಲ್ಲಿ ಅದನ್ನು ಪತ್ತೆ ಮಾಡಿದ ಗ್ರಾಮಸ್ಥರು ಕೊಂದು ಹಾಕಿದ್ದಾರೆ. ಆದರೆ, ಹುಚ್ಚು ನಾಯಿಯು ಗ್ರಾಮದಲ್ಲಿರುವ ಇನ್ನಿತರ ಕೆಲ ನಾಯಿಗಳಿಗೂ ಕಚ್ಚಿರಬಹುದು ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.