ಜಿಲ್ಲೆ

ಜೂಜಾಡುತ್ತಿದ್ದ 8 ಮಂದಿ ಬಂಧನ

ರೇಷ್ಮೆ ನಗರ ಡೆಸ್ಕ್

ಬಿಡದಿ: ನಿಂಗೇಗೌಡನದೊಡ್ಡಿ ಗ್ರಾಮ ಹೊರವಲಯದ ಜೂಜು ಅಡ್ಡೆ ಮೇಲೆ ಭಾನುವಾರ ಬಿಡದಿ ಪೊಲೀಸರು ದಾಳಿ ನಡೆಸಿ, 8 ಜನರನ್ನು ಬಂಧಿಸಿ, 7,200 ರೂ. ನಗದು ವಶಕ್ಕೆ ಪಡೆದಿದ್ದಾರೆ.

ಗ್ರಾಮದ ಹೊರ ವಲಯದ ರ್ನಿಜನ ಪ್ರದೇಶದಲ್ಲಿ ಕೆಲವರು ಜೂಜಾಡುತ್ತಿದ್ದ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ಮಾಡಿದ್ದಾರೆ. ಬಿಡದಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.