ರಟ್ಟಿಹಳ್ಳಿ: ತಾಲೂಕಿನ ಬತ್ತಿಕೊಪ್ಪ ಗ್ರಾಮದಲ್ಲಿ ಶ್ರೀ ವೀರಮಹೇಶ್ವರ ಜಾತ್ರಾ ಮಹೋತ್ಸವ, ಕಾರ್ತಿಕೋತ್ಸವ, ಗುಗ್ಗಳ ಮಹೋತ್ಸವದ ನಿಮಿತ್ತ ಸಾಮೂಹಿಕ ವಿವಾಹ ಮತ್ತು ರೈತ ದಿನಾಚರಣೆ ಸಂಭ್ರಮದಿಂದ ಜರುಗಿದವು.
ಪಟ್ಟಣದ ಕಬ್ಬಿಣಕಂತಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಹಿರೇಮಾಗಡಿ ಶ್ರೀ ಮುರಘರಾಜೇಂದ್ರ ಸ್ವಾಮೀಜಿ ಮತ್ತು ಶ್ರೀ ಶಿವಯೋಗಿ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರು.
ರೈತ ಪರಮೇಶ್ವರಪ್ಪ ಹಲಗೇರಿ ಮಾತನಾಡಿ, ಸಾಮೂಹಿಕ ವಿವಾಹದಲ್ಲಿ 8 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ದಂಪತಿಗಳು ಪರಸ್ಪರ ಹೊಂದಾಣಿಕೆ, ಪ್ರೀತಿ-ವಿಶ್ವಾಸದೊಂದಿಗೆ ಜೀವನ ಸಾಗಿಸಬೇಕು. ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ ಬೀಳುತ್ತದೆ ಎಂದರು.
ಸಮಾಜ ಸೇವಕ ಜಿ.ಪಿ. ಪ್ರಕಾಶಗೌಡ್ರು ಅವರು ಎಲ್ಲ ವಧುಗಳಿಗೆ ಕಾಲುಂಗುರ ನೀಡಿ, ಅನ್ಯೋನ್ಯವಾಗಿ ಜೀವನ ಸಾಗಿಸಬೇಕು ಎಂದು ಶುಭ ಹಾರೈಸಿದರು.
ಗ್ರಾಮದ ಕೊಟ್ರಯ್ಯ ಶಾಸ್ತ್ರಿ ವೈದಿಕತ್ವ ನಿರ್ವಹಿಸಿದರು. ಗ್ರಾಪಂ ಸದಸ್ಯರಾದ ಟಿ.ಸಿ. ಶಿವಪ್ಪನವರ, ಮಹೇಶ ಬಣಕಾರ, ಹನುಮಂತಪ್ಪ ನಾಗೇನಹಳ್ಳಿ, ಸುನೀತಾ ಹಾದ್ರಿಹಳ್ಳಿ, ರೈತರಾದ ಕುಮಾರ ಬಳಿಗಾರ, ರಿಂದೇಶ ಗೌಳೇರ, ಈರಪ್ಪ ದ್ಯಾವನಕಟ್ಟಿ, ಕಲ್ಲಪ್ಪ ಕಲ್ಲೇದೇವರು, ಮಹೇಶ್ವರಗೌಡ ಲಿಂಗದಹಳ್ಳಿ, ಧರ್ಮಪ್ಪ ಆಲದಕಟ್ಟಿ, ಗುಡ್ಡಪ್ಪ ದೇಸಾಯಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.