ಜಿಲ್ಲೆ

ಚಿಕ್ಕಮಗಳೂರಿನಲ್ಲಿ 8 ಕರೊನಾ ಸೋಂಕು ಪತ್ತೆ

madikerimailmanju

ಚಿಕ್ಕಮಗಳೂರು: ಕಾಫಿನಾಡಲ್ಲಿ ಬುಧವಾರ 50 ಮಂದಿ ಸಂಪೂರ್ಣ ಗುಣ ಹೊಂದಿ ಬಿಡುಗಡೆಯಾಗಿದ್ದು 8 ಜನರಲ್ಲಿ ಸೋಂಕು ಪತ್ತೆಯಾಗಿದೆ.

ತಾಲೂಕುವಾರು ತರೀಕೆರೆಯ ಮೂವರು, ಕಡೂರಿನ ಇಬ್ಬರು, ಚಿಕ್ಕಮಗಳೂರು, ಕೊಪ್ಪ ಹಾಗೂ ಶೃಂಗೇರಿಯ ತಲಾ ಒಬ್ಬರು

ಸೋಂಕಿತರಲ್ಲಿ ಸೇರಿದ್ದಾರೆ.

ಜಿಲ್ಲೆಯಲ್ಲಿ 243 ಸಕ್ರಿಯ ಪ್ರಕರಣಗಳಿವೆ. ಇದುವರೆಗೆ 12972 ಮಂದಿಯಲ್ಲಿ ಕರೊನಾ ಸೋಂಕು ಪತ್ತೆಯಾಗಿದ್ದು ಅವರಲ್ಲಿ 12592 ಮಂದಿ ಸಂಪೂರ್ಣ ಗುಣ ಹೊಂದಿ ಬಿಡುಗಡೆಯಾಗಿದ್ದಾರೆ. ಇದುವರೆಗೆ 137 ಮಂದಿ ಮೃತಪಟ್ಟಿದ್ದಾರೆ. ಬುಧವಾರ ಪತ್ತೆಯಾದವರಲ್ಲಿ ಹೋಂ ಐಸೊಲೇಶನ್‍ನಲ್ಲಿ 7, ಖಾಸಗಿ ಅಸ್ಪತ್ರೆಯಲ್ಲಿ ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.