ಜಿಲ್ಲೆ

ಪ್ರತಿಪಕ್ಷಗಳ ನಿರಂತರ ಗದ್ದಲದಲ್ಲೇ ಎಂಟು ವಿಧೇಯಕಗಳ ಮಂಡನೆ, ಅನುಮೋದನೆ

malli

ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಡಿರುವ ಮಾತುಗಳ ವಿಚಾರದಲ್ಲಿ ಪ್ರತಿಪಕ್ಷಗಳ ನಿರಂತರ ಗದ್ದಲ, ಗಲಾಟೆ, ಕೋಲಾಹಲದ ಮಧ್ಯೆ 8 ವಿಧೇಯಕಗಳನ್ನು ಮಂಡಿಸಿ ಸರ್ಕಾರ ಅನುಮೋದನೆ ಪಡೆಯಿತು.

ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರ ನಡುವಿನ ಆರೋಪ-ಪ್ರತ್ಯಾರೋಪ, ಪರ-ವಿರೋಧಿ ಧಿಕ್ಕಾರಗಳ ನಡುವೆಯೇ ವಿಧೇಯಕ ಮಂಡಿಸಲಾಯಿತು. ಯಾವ ವಿಧೇಯಕವನ್ನು ಯಾರು ಮಂಡಿಸಿದರು ಎಂಬುದೇ ತಿಳಿಯದ ಕೋಲಾಹಲದ ವಾತಾವರಣ ಸೃಷ್ಟಿಯಾಗಿತ್ತು.

ನೋಟಾಕ್ಕೆ ಯೆಸ್

ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಪೈಕಿ ‘ಮೇಲಿನ ಯಾರೊಬ್ಬರಿಗೂ ಅಲ್ಲ’ ನೋಟಾ ಕುರಿತು ಮತಪತ್ರಗಳಲ್ಲಿ ಹಾಗೂ ವಿದ್ಯುನ್ಮಾನ ಮತಯಂತ್ರಗಳಲ್ಲಿ ಮತದಾರರ ಆಯ್ಕೆಯನ್ನು ನೀಡಲು ಕರ್ನಾಟಕ ಪೌರಸಭೆಗಳ ಅಧಿನಿಯಮಕ್ಕೆ ತಿದ್ದುಪಡಿ ತರುವ ವಿಧೇಯಕಕ್ಕೆ ಒಪ್ಪಿಗೆ ಪಡೆಯಲಾಯಿತು.

  • ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ತಿದ್ದುಪಡಿ.
  • ಕರ್ನಾಟಕ ಬಹಿರಂಗ ಸ್ಥಳಗಳ ವಿರೂಪಗೊಳಿಸುವುದನ್ನು ಪ್ರತಿಬಂಧಿಸುವ ತಿದ್ದುಪಡಿ.
  • ಕರ್ನಾಟಕ ರೇಸ್ ಕೋರ್ಸ್​ಗಳಿಗೆ ಪರವಾನಗಿ ನೀಡುವ ತಿದ್ದುಪಡಿ.
  • ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ತಿದ್ದುಪಡಿ.
  • ಕರ್ನಾಟಕ ಪೌರಸಭೆಗಳು ಮತ್ತು ಕೆಲವು ಇತರ ಕಾನೂನು ತಿದ್ದುಪಡಿ.
  • ಕರ್ನಾಟಕ ಭೂ ಸುಧಾರಣೆಗಳ ತಿದ್ದುಪಡಿ.
  • ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರ.
  • ಕರ್ನಾಟಕ ಉನ್ನತ ಶೈಕ್ಷಣಿಕ ಸಂಸ್ಥೆಗಳಲ್ಲಿ ಶಿಕ್ಷಕರ ವೇತನ ಮತ್ತು ನಿವೃತ್ತಿ ವೇತನದ ನಿಯಂತ್ರಣ.