ಕಲಬುರಗಿ: ಗೃಹಜ್ಯೋತಿ ಯೋಜನೆಯಡಿ ಜೆಸ್ಕಾಂ ವ್ಯಾಪ್ತಿಯಲ್ಲಿ ಈವರೆಗೆ ೮.೭೪ ಲಕ್ಷ ಫಲಾನುಭವಿಗಳು ಲಾಭ ಪಡೆದಿದ್ದಾರೆ ಎಂದು ಜೆಸ್ಕಾಂ (ತಾಂತ್ರಿಕ) ಪ್ರಭಾರಿ ನಿರ್ದೇಶಕ ಆರ್.ಡಿ. ಚಂದ್ರಶೇಖರ್ ಹೇಳಿದರು. ಜೆಸ್ಕಾಂ ಆವರಣದಲ್ಲಿ ಮಂಗಳವಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕೇಂದ್ರ ಸರ್ಕಾರದ ಇಂಧನ ಮಂತ್ರಾಲಯ ಪ್ರಕಟಿಸಿದ ೧೧ನೇ ಇಂಟಿಗ್ರೇಟೆಡ್ ರೇಟಿಂಗ್ ಪ್ರಕಾರ ೨೦೨೦-೨೨ನೇ ಆರ್ಥಿಕ ವರ್ಷಗಳಲ್ಲಿ ರಾಷ್ಟçಮಟ್ಟದಲ್ಲಿ ಜೆಸ್ಕಾಂಗೆ ದ್ವಿತೀಯ ಸ್ಥಾನ ಲಭಿಸಿದೆ. ಇದರ ಹಿಂದೆ ವ್ಯವಸ್ಥಾಪಕ ನಿರ್ದೇಶಕರ ಶ್ರಮ ಅಡಗಿದೆ. ಗ್ರಾಹಕರಿಗೆ ಇನ್ನೂ ಅತ್ಯುತ್ತಮ ಸೇವೆ ನೀಡಲು ಶ್ರಮಿಸಲಾಗುವುದು ಎಂದರು. ಪ್ರಭಾರಿ ಮುಖ್ಯ ಆರ್ಥಿಕ ಅಧಿಕಾರಿ ರೇಣುಕಾ ತುಂಬದ್, ಪ್ರಧಾನ ವ್ಯವಸ್ಥಾಪಕಿ ಪ್ರೇಮಿಳಾ ಎಂ.ಕೆ., ಪೊಲೀಸ್ ಅಧೀಕ್ಷಕಿ ಸವಿತಾ ಹೂಗಾರ್, ಹಿರಿಯ ಆಪ್ತ ಕಾರ್ಯದರ್ಶಿ ಮಹ್ಮದ್ ಮಿನಾಜುದ್ದೀನ್ ಇತರರಿದ್ದರು.