filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:null; brp_del_sen:null; motionR: 0; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 162.16278;aec_lux_index: 0;albedo: ;confidence: ;motionLevel: 0;weatherinfo: null;temperature: 30; 
ಜಿಲ್ಲೆ

ತಾಲೂಕು ಕಚೇರಿಗೆ 8.60 ಕೋಟಿ ರೂ.

ಪ್ರಶಾಂತ ಹೂಗಾರ

ಕಾಗವಾಡ: ಕಾಗವಾಡ ನೂತನ ತಾಲೂಕು ಆಗಿ ವರ್ಷ ಕಳೆದರೂ, ತಾಲೂಕು ಆಡಳಿತ ಕಚೇರಿಗೆ ಸ್ವಂತ ಕಚೇರಿ ಇಲ್ಲ. ಶಾಸಕ ರಾಜು ಕಾಗೆ ಪಯತ್ನದಿಂದ ಸರ್ಕಾರದಿಂದ 8.60 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಪ್ರಜಾಸೌಧ ನಿರ್ಮಾಣ ಜಾಗಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಮಾರ್ಗದರ್ಶನ ನೀಡಿ ಮಾತನಾಡಿದ ಅವರು, ಶೀಘ್ರದಲ್ಲೇ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಾರಂಭವಾಗಲಿದೆ ಎಂದರು.

ಶಾಸಕ ರಾಜು ಕಾಗೆ, ಮಾಜಿ ಸಚಿವ ವೀರಕುಮಾರ ಪಾಟೀಲ, ಮಾಜಿ ಶಾಸಕ ಮೋಹನ ಶಾ, ಗಜಾನನ ಮಂಗಸೂಳಿ, ಡಾ.ಎನ್.ಎ ಮಗದುಮ್ಮ, ತಹಸೀಲ್ದಾರ್ ರಾಜೇಶ ಬುರ್ಲಿ, ವೀರಣ್ಣ ವಾಲಿ, ಎಂ.ಆರ್.ಮುಂಜೆ, ಸಂಜುಕುಮಾರ ಸದಲಗೆ, ಜಯಾನಂದ ಹಿರೇಮಠ, ರಮೇಶ ಚೌಗಲಾ, ಜ್ಯೋತಿಕುಮಾರ ಪಾಟೀಲ, ಸೌರಭ ಪಾಟೀಲ ಇತರರಿದ್ದರು.