ಜಿಲ್ಲೆ

7ರಂದು ಶ್ರೀ ಜಯವಿಭವ ಶ್ರೀಗಳ ಸ್ಮರಣೋತ್ಸವ

ಡಿ.ಪಿ.ನಾಗರಾಜ ಶ್ರೇಷ್ಠಿ

ಚಿತ್ರದುರ್ಗ:ಮುರುಘಾಮಠದ ಪೀಠಾಧ್ಯಕ್ಷರಾಗಿದ್ದ ಲಿಂ.ಜಗದ್ಗುರು ಶ್ರೀ ಜಯವಿಭವ ಮುರುಘರಾಜೇಂದ್ರ ಸ್ವಾಮೀಜಿ ಅವರ ಸ್ಮರಣೋತ್ಸವ ಕಾರ‌್ಯಕ್ರಮ ಶ್ರೀ ಮಠದ ಜಯವಿಭವ ಶ್ರೀಗಳ ಲೀಲಾವಿಶ್ರಾಂತಿ ತಾಣದಲ್ಲಿ ಮೇ 7ರಂದು ಬೆಳಗ್ಗೆ 8.30ಕ್ಕೆ ಏರ್ಪಡಿಸಲಾಗಿದೆ. ಮುರುಘಾಮಠದ

ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ.ಕಳಸದ ಅಧ್ಯಕ್ಷತೆ ವಹಿಸುವರು. ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ವಹಿಸುವರು.ವಚನ ಪಠಣ, ವಚನಾಭಿಷೇಕ,ಪೂಜ್ಯರ ವ್ಯಕ್ತಿತ್ವ ಸಾಧನೆ ಕುರಿತಾಗಿ ಚಿಂತನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

-------