ಜಿಲ್ಲೆ

7ನೇ ವೇತನ ಪ್ರಯಾಣ ಭತ್ಯೆ ನೀಡಿ

ಕಲಬುರಗಿ: ಏಳನೇ ವೇತನ ಆಯೋಗದ ಶಿಫಾರಸ್ಸಿನಂತೆ ಶೇ.೬ ಪ್ರಯಾಣ ಭತ್ಯೆ ಆದೇಶವನ್ನು ಸರ್ಕಾರ ಕೂಡಲೇ ಹೊರಡಿಸಬೇಕು, ವೇತನಾ ಯೋಗದ ಎಲ್ಲ ಶಿಫಾರಸ್ಸು ಯಥಾವತ್ತು ಜಾರಿ ಮಾಡಬೇಕು ಎಂದು ರಾಜ್ಯ ಸರ್ಕಾರಿ ಅಂಗವಿಕಲ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಂತೋಷ ದಾಯಗೊಂಡೆ ಹೇಳಿದರು.

ಕೋರ್ಟ್ ಆದೇಶದಂತೆ ರಾಜ್ಯದಲ್ಲಿ ಎ, ಬಿ ವೃಂದದ ಹುದ್ದೆಗಳಲ್ಲೂ ಬಡ್ತಿ ಮೀಸಲು ಕಲ್ಪಿಸಬೇಕು, ಒಂದು ಬಾರಿ ವರ್ಗಾವಣೆ ಪ್ರಕ್ರಿಯೆ ಕೈಬಿಡಬೇಕು, ಪರಿಸ್ಥಿತಿಗೆ ಅನುಗುಣ ವರ್ಗಾವಣೆಗೆ ಅವಕಾಶ ಕಲ್ಪಿಸಬೇಕು, ಅಂಗವಿಕಲರ ಬ್ಯಾಕ್‌ಲಾಗ್ ಹುದ್ದೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಬೇಕು, ನಿರುದ್ಯೋಗಿ ಅಂಗವಿಕಲರಿಗೆ ಮಾಸಿಕ ಐದು ಸಾವಿರ ಪೋಷಣಾ ಭತ್ಯೆ ನೀಡಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ವಿಶೇಷ ಚೇತನ ಕಾರ್ಯಕರ್ತರನ್ನು ಕಾಯಂ ಮಾಡಬೇಕು, ಶೋಷಣೆ ತಪ್ಪಿಸಬೇಕು, ವಿಕಲಚೇತನರಿಗೆ ಪ್ರಯಾಣದ ರಿಯಾಯಿತಿ ಬಸ್ ಪಾಸ್ ೧೦೦ ಕೀ.ಮೀ.ಗೆ ಮಿತಿಗೊಳಿಸುವುದು ಕೈ ಬಿಡಬೇಕು, ಸುಗಮ್ಯ ಯೋಜನೆ ಅಡಿ ಎಲ್ಲೆಡೆ ರ‍್ಯಾಂಪ್, ಲಿಫ್ಟ್, ಶೌಚಗೃಹ ನಿರ್ಮಿಸಬೇಕು, ಅಂಗವಿಕಲರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಶೇ.೫ ಪ್ರತ್ಯೇಕ ಅನುದಾನ ಮೀಸಲಿಡಬೇಕು, ಕ್ರೀಡಾ ಚಟುವಟಿಕೆಗೆಗೆ ಪ್ರತ್ಯೇಕ ಅನುದಾನ ನೀಡಬೇಕು, ೨೧ ಸ್ವರೂಪದ ಅಂಗವಿಲತೆಯುಳ್ಳ ವ್ಯಕ್ತಿಗಳನ್ನು ಗುರುತಿಸಿದ್ದು, ಅದಕ್ಕೆ ಅನುಗುಣವಾಗಿ ಮೀಸಲಾತಿಯನ್ನು ಶೇ.೫ರಿಂದ ಶೇ.೧೫ಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ನ.೫ರಂದು ನಗರದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಚಂದ್ರಕಾAತ ಚಂದಾಪುರ, ಸುರೇಶ ಕುಲ್ಕರ್ಣಿ, ಲಾಲ್ ಅಹ್ಮದ್ ಇದ್ದರು.