ಜಿಲ್ಲೆ

ಜ್ವರದಿಂದ 7ನೇ ತರಗತಿ ವಿದ್ಯಾರ್ಥಿನಿ ಮೃತ್ಯು

Dakshina Kannada

ಈಶ್ವರಮಂಗಲ: ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದ ಚಿಕ್ಕಮುಡ್ನೂರು ಗ್ರಾಮದ ಆರಿಗೊ ನಿವಾಸಿ ರಾಜೇಶ್ ಮತ್ತು ಶೋಭಾ ದಂಪತಿ ಪುತ್ರಿ, ಚಿಕ್ಕಮುಡ್ನೂರು ಸರ್ಕಾರಿ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ರಿತೀಕ್ಷಾ(13) ಎಂಬಾಕೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದಾಳೆ.

ಜ್ವರದಿಂದ ಬಳಲುತ್ತಿದ್ದ ರಿತೀಕ್ಷಾಳನ್ನು ವಾರದ ಹಿಂದೆ ಚಿಕಿತ್ಸೆಗಾಗಿ ಪುತ್ತೂರಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಕಾಯಿಲೆ ಉಲ್ಭಣಿಸತೊಡಗಿದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಅಲ್ಲಿ ಆಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಮೃತಳ ಗೌರವಾರ್ಥವಾಗಿ ಚಿಕ್ಕಮುಡ್ನೂರು ಶಾಲೆಯಲ್ಲಿ ನುಡಿನಮನ ಸಲ್ಲಿಸಿ ಶನಿವಾರ ರಜೆ ಸಾರಲಾಗಿತ್ತು.