ಮಡಿಕೇರಿ: ಕೊಡಗು ಹಿತರಕ್ಷಣಾ ವೇದಿಕೆ ವತಿಯಿಂದ ಮಡಿಕೇರಿ ನಗರದ ಟೋಲ್ ಗೇಟ್ ಬಳಿಯಿರುವ ವಿಶ್ವಮಾನವ ಉದ್ಯಾನವನದಲ್ಲಿ ೭೬ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಆಚರಿಸಲಾಯಿತು.
ವೇದಿಕೆಯ ಅಧ್ಯಕ್ಷ ರವಿಗೌಡ ಅವರು ಕುವೆಂಪು ಪುತ್ತಳಿಗೆ ಮಾಲಾರ್ಪಣೆ ಮಾಡಿದರು. ಸಮಾಜ ಸೇವಕರು ಹಾಗೂ ರಾಷ್ಟ್ರೀಯ ಅಪರಾಧ ಮಾಹಿತಿ ವಿಭಾಗದ ಕರ್ನಾಟಕ ಡೆಪ್ಯೂಟಿ ಡೈರೆಕ್ಟರ್ ಡಾ.ಜಾನ್ಸನ್ ಧ್ವಜಾರೋಹಣ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ವೇದಿಕೆಯ ಮಡಿಕೇರಿ ತಾಲೂಕು ಅಧ್ಯಕ್ಷ ನಾಗೇಶ್, ತಾಲೂಕು ಉಪ ಕಾರ್ಯದರ್ಶಿ ಅಕ್ಷಿತ್, ಮಡಿಕೇರಿ ನಗರ ಅಧ್ಯಕ್ಷ ಭರತ್, ಮಹಿಳಾ ಘಟಕದ ಕಾರ್ಯದರ್ಶಿ ಪೂರ್ಣಿಮಾ, ನಿರ್ದೇಶಕಿ ಲಿಲ್ಲಿಗೌಡ, ಸಮಿತಿ ಸದಸ್ಯರುಗಳು ಪಾಲ್ಗೊಂಡಿದ್ದರು.