ಯಾದಗಿರಿ: ಸಾರ್ವಜನಿಕ ಸೇವೆಯಲ್ಲಿರುವ ಪ್ರತಿಯೊಬ್ಬ ಅಧಿಕಾರಿ ನಿಗದಿತ ಅವಧಿಯೊಳಗೆ ಜನರ ಕೆಲಸ ಮಾಡಿಕೊಡಬೇಕು ಎಂಬುದು ಸರ್ಕಾರರದ ನಿಯಮವಾಗಿದೆ ಎಂದು ಡಿವೈಎಸ್ಪಿ ಡಾ.ಸಂತೋಷ.ಕೆ.ಎಮ್. ತಿಳಿಸಿದರು.
ಗುರುವಾರ ಜಿಲ್ಲೆಯ ಹುಣಸಗಿ ಪಟ್ಟಣದ ತಹಸೀಲ್ ಕಚೇರಿ ಆವರಣದಲ್ಲಿ ಎಸಿಬಿಯಿಂದ ಜರುಗಿದ ಜನಸಂಪರ್ಕ ಸಭೆ ಹಾಗೂ ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ಒಂದು ವೇಳೆ ಜನರ ಕೆಲಸಗಳನ್ನು ಮಾಡಿಕೊಡದೆ ಇದ್ದಲ್ಲಿ ಅಂಥ ಅಧಿಕಾರಿ ವಿರುದ್ಧ ಎಸಿಬಿಗೆ ದೂರು ಸಲ್ಲಿಸಬಹುದಾಗಿದೆ. ಸರ್ಕಾರಿ ನೌಕರ ಅಥವಾ ಅಧಿಕಾರಿ ನಿಗದಿತ ಅದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಮಾಡಿದ್ದಲ್ಲಿ, ಯಾವುದೇ ತರಹದ ಬೇಡಿಕೆ ಇಟ್ಟಲ್ಲಿ ನಮಗೆ ಮಾಹಿತಿ ನೀಡುವಂತೆ ಸಲಹೆ ನೀಡಿದರು.
ದೂರು ನೀಡಿದ ವ್ಯಕ್ತಿಯ ಹೆಸರು ಗೌಪ್ಯವಾಗಿಡಲಾಗುತ್ತದೆ. ಸರ್ಕಾರದ ಯೋಜನೆಗಳ್ನು ಅರ್ಹ ಫಲಾನುಭವಿಗಳಿಗೆ ಮುಟ್ಟಿಸುವಲ್ಲಿ ಅನಗತ್ಯ ವಿಳಂಬ ಧೋರಣೆ ತಾಳಿದರೆ ಆ ಅಧಿಕಾರಿಗಳ ವಿರುದ್ಧ ದೂರು ಕೊಡಬಹುದು. ಆದರೆ ದೂರನ್ನು ಯಾವ ರೀತಿ ನೀಡಬಹುದು ಎಂಬ ಬಗ್ಗೆ ಸಭೆಯಲ್ಲಿ ತಿಳಿಸಲಾಗುವುದು ಎಂದು ಹೇಳಿದರು.
ಗೆದ್ದಲಮರಿ ಗ್ರಾಮದ ನಿಂಗನಗೌಡ ಪಾಟೀಲ 1974ನೇ ಸಾಲಿನ ಪಹಣಿಯಲ್ಲಿನ ನೂನ್ಯತೆ ಕುರಿತು ಪ್ರಶ್ನೆ ಕೇಳಿ ಗಮನ ಸೆಳೆದರು. ಪಿಐ ಜಿ.ಎಸ್.ಬಿರಾದಾರ, ಗುತ್ತಪ್ಪಗೌಡ, ಪ್ರಕಾಶ, ಜೇಸ್ಕಾಂ ಎಇಇ ಮಹ್ಮದ ರಫೀಕ್, ಪಶು ಇಲಾಖೆ ಡಾ.ಅನಂತಮೂತರ್ಿ, ಉಪ ಖಜಾನೆ ಅಧಿಕಾರಿ ಸಣಕೆಪ್ಪ ಕೊಂಡಿಕಾರ್, ಪ್ರಭಾರಿ ಉಪನೊಂದಣಿ ಅಧಿಕಾರಿ ಮಹಾದೇವಿ ಇದ್ದರು ಸಭೆಯಲ್ಲಿದ್ದರು.