ಸಿರಗುಪ್ಪದಲ್ಲಿ ಅಂಗಡಿಗಳ ಮೇಲೆ ದಾಳಿ ನಡೆಸಿದ ನಗರಸಭೆ ಅಧಿಕಾರಿಗಳು ಪ್ಲಾಸ್ಟಿಕ್ ವಶಕ್ಕೆ ಪಡೆದರು. ಹಿರಿಯ ಆರೋಗ್ಯ ನಿರೀಕ್ಷಕ ರಂಗಸ್ವಾಮಿ, ಎಇಇ ಸ್ವರ್ಣಲತಾ, ಸಮುದಾಯ ಸಂಘಟಕ ಹಿಮಂತ್ ರಾಜ್ ಬಾಗ್ಲಿ ಇತರರಿದ್ದರು. 
ಜಿಲ್ಲೆ

75ಕೆಜಿ ಪ್ಲಾಸ್ಟಿಕ್‌ವಶ

ರುದ್ರಪ್ಪ ವಾಲಿ

ಸಿರಗುಪ್ಪ: ನಗರದ ವಿವಿಧ ಅಂಗಡಿಗಳ ಮೇಲೆ ನಗರಸಭೆ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿ 75 ಕೆಜಿ ಪ್ಲಾಸ್ಟಿಕ್ ವಶಕ್ಕೆ ಪಡೆದರು. ನಗರಸಭೆ ಪೌರಾಯುಕ್ತ ಗಂಗಾಧರ ಮಾರ್ಗದರ್ಶನದಲ್ಲಿ ಹಿರಿಯ ಆರೋಗ್ಯ ನಿರೀಕ್ಷ ರಂಗಸ್ವಾಮಿ, ಎಇಇ ಸ್ವರ್ಣಲತಾ, ಸಮುದಾಯ ಸಂಘಟಕ ಹಿಮಂತ್‌ರಾಜ್ ಬಾಗ್ಲಿ ನೇತೃತ್ವದಲ್ಲಿ ದಾಳಿ ನಡೆಸಿ, ಪ್ಲಾಸ್ಟಿಕ್ ಚೀಲ ಇತರ ಸಾಮಗ್ರಿ ವಶಕ್ಕೆ ತೆಗೆದುಕೊಂಡು ಪರಿಸರಕ್ಕೆ ಪೂರಕವಾಗುವ ವಸ್ತುಗಳನ್ನು ಬಳಕೆ ಮಾಡುವಂತೆ ಸಲಹೆ ನೀಡಿದರು. ವ್ಯಾಪಾರಿಗಳಿಗೆ ದಂಡ ವಿಧಿಸಲಾಯಿತು.