ಜಿಲ್ಲೆ

75 ಜನರಿಗೆ ಕರೊನಾ ಸೋಂಕು

ಕಾರವಾರ: ಜಿಲ್ಲೆಯಲ್ಲಿ ಮಂಗಳವಾರ ಹೊಸದಾಗಿ 75 ಜನರಿಗೆ ಕರೊನಾ ಸೋಂಕು ಕಾಣಿಸಿಕೊಂಡಿದೆ. 69 ಜನ ಗುಣ ಹೊಂದಿ ಬಿಡುಗಡೆಯಾಗಿದ್ದಾರೆ. ಕಾರವಾರ, ಭಟ್ಕಳದಲ್ಲಿ ತಲಾ 5, ಕುಮಟಾ, ಹೊನ್ನಾವರ, ಯಲ್ಲಾಪುರದಲ್ಲಿ ತಲಾ 1, ಮುಂಡಗೋಡಿನಲ್ಲಿ 9, ಸಿದ್ದಾಪುರದಲ್ಲಿ 4, ಶಿರಸಿಯಲ್ಲಿ 16, ಹಳಿಯಾಳ, ದಾಂಡೇಲಿಯಲ್ಲಿ 30, ಜೊಯಿಡಾದಲ್ಲಿ 3 ಜನರಿಗೆ ಸೋಂಕು ತಗುಲಿದೆ. ಹಳಿಯಾಳ ದಾಂಡೇಲಿಯಲ್ಲಿ 33, ಮುಂಡಗೋಡಿನಲ್ಲಿ 6, ಭಟ್ಕಳದಲ್ಲಿ 5, ಹೊನ್ನಾವರದಲ್ಲಿ ಒಬ್ಬ, ಕಾರವಾರದಲ್ಲಿ 4, ಕುಮಟಾದಲ್ಲಿ 20 ಜನರು ಗುಣ ಹೊಂದಿ ಬಿಡುಗಡೆಯಾಗಿದ್ದಾರೆ.