ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಡಿ. 14ರಂದು ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 73,811 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ರಾಜೀ ಆಗಬಹುದಾದಂತಹ 17,596 ಪ್ರಕರಣಗಳಲ್ಲಿ 12,551 ಪ್ರಕರಣ ಹಾಗೂ ವ್ಯಾಜ್ಯಪೂರ್ವ 63,013 ಪ್ರಕರಣಗಳಲ್ಲಿ 61,260 ಪ್ರಕರಣಗಳು ಸೇರಿ 73,811 ಪ್ರಕರಣಗಳನ್ನು ರಾಜೀ ಸಂಧಾನ ಮಾಡಿಸಲಾಗಿದೆ. ಪ್ರಕರಣಗಳನ್ನು ಇತ್ಯರ್ಥಪಡಿಸಲು ಸೂಕ್ತ ಸಲಹೆ ಸೂಚನೆ ನೀಡಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಜಿ. ರಮಾ ಹಾಗೂ ನ್ಯಾಯಾಧೀಶರು, ವಕೀಲರು, ಬ್ಯಾಂಕ್, ಸಹಕಾರಿ ಸಂಘ, ಹಣಕಾಸು ಸಂಸ್ಥೆ, ವಿಮಾ ಕಂಪನಿಗಳು, ಅಭಿಯೋಜನೆಯ ಅಽಕಾರಿಗಳು, ಪೊಲೀಸ್ ಅಧಿಕಾರಿಗಳು ಮತ್ತು ಕಕ್ಷಿದಾರರಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪರವಾಗಿ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಸದಸ್ಯ ಕಾರ್ಯದರ್ಶಿ ಪರಶುರಾಮ ದೊಡ್ಡಮನಿ ಕೃತಜ್ಞತೆ ತಿಳಿಸಿದ್ದಾರೆ.