ಬೆಳಗಾವಿ: ಜಿಲ್ಲೆಯಲ್ಲಿ ಕರೊನಾ ಅಟ್ಟಹಾಸ ಮುಂದುವರಿದಿದ್ದು, ಸೋಮವಾರ 736 ಜನರಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರ 39,641ಕ್ಕೆ ಏರಿಕೆಯಾಗಿದೆ. ಸೋಂಕಿನಿಂದ ಬಳಲುತ್ತಿದ್ದ ಬೆಳಗಾವಿಯ 38 ವರ್ಷದ ವ್ಯಕ್ತಿ ಹಾಗೂ ಬಾಗಲಕೋಟೆಯ 70 ವರ್ಷದ ವೃದ್ಧರೊಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಬಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರ ಸಂಖ್ಯೆ 374ಕ್ಕೆ ಏರಿಕೆಯಾಗಿದೆ.
ಬೆಳಗಾವಿ ತಾಲೂಕಿನಲ್ಲಿ 391, ಗೋಕಾಕದಲ್ಲಿ 80, ಅಥಣಿಯಲ್ಲಿ 55, ಚಿಕ್ಕೋಡಿಯಲ್ಲಿ 40, ರಾಯಬಾಗದಲ್ಲಿ 36, ಹುಕ್ಕೇರಿಯಲ್ಲಿ 32, ಬೈಲಹೊಂಗಲದಲ್ಲಿ 30, ರಾಮದುರ್ಗ, ಸವದತ್ತಿಯಲ್ಲಿ ತಲಾ 22, ಖಾನಾಪುರದಲ್ಲಿ 11 ಹಾಗೂ ಹೊರಜಿಲ್ಲೆಯ 17 ಜನರಿಗೆ ಸೋಂಕು ತಗುಲಿದೆ.
ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 531 ಜನರು ಗುಣಮುಖರಾಗಿ ಸೋಮವಾರ ಬಿಡುಗಡೆಯಾಗಿದ್ದು, ಈವರೆಗೆ 32,377 ಜನರು ಗುಣಮುಖರಾದಂತಾಗಿದೆ. 6,890 ಸಕ್ರಿಯ ಪ್ರಕರಣಗಳಿವೆ. 1,266 ಜನರು ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಬರಬೇಕಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
140 ವಾಹನ ಜಪ್ತಿ: ಬೆಳಗಾವಿ ಕಮಿಷನರೇಟ್ ವ್ಯಾಪ್ತಿಯಲ್ಲಿ ಸೋಮವಾರ ಅನಗತ್ಯವಾಗಿ ಸಂಚರಿಸುತ್ತಿದ್ದ 140 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಮಾಸ್ಕ್ ಧರಿಸದೆ ಸಂಚರಿಸಿದ 230 ಸವಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಡಿಸಿಪಿ ಡಾ.ವಿಕ್ರಂ ಆಮ್ಟೆ ತಿಳಿಸಿದ್ದಾರೆ.