ಜಿಲ್ಲೆ

73.61 ಲಕ್ಷ ರೂಪಾಯಿ ವಂಚನೆ

ಮರಿದೇವ ಹೂಗಾರ

ಹುಬ್ಬಳ್ಳಿ: ಹಣ ಹೂಡಿಕೆ ಮಾಡಿದರೆ ತಿಂಗಳಿಗೆ ಶೇ. 500ರಷ್ಟು ಲಾಭ ಕೊಡಿಸುವುದಾಗಿ ನಂಬಿಸಿದ ವಂಚಕರು, ನಿವೃತ್ತ ಬ್ಯಾಂಕ್ ನೌಕರರೊಬ್ಬರಿಂದ 73.61 ಲಕ್ಷ ರೂಪಾಯಿ ವರ್ಗಾಯಿಸಿಕೊಂಡು ವಂಚಿಸಲಾಗಿದೆ.
ನಗರದ ಸಿದ್ದೇಶ್ವರ ವಂಚನೆಗೆ ಒಳಗಾದವರು. ಫೇಸ್‌ಬುಕ್‌ನಲ್ಲಿ ಹಣ ಹೂಡಿಕೆ ಕುರಿತು ಜಾಹೀರಾತು ನೋಡಿ ವಾಟ್ಸ್ ಆ್ಯಪ್ ಮೂಲಕ ಸಂಪರ್ಕಿಸಿದ್ದಾರೆ. ಅಪರಿಚಿತರು ಕೆಕೆಆರ್‌ಸಿಎ ಸ್ಟಾಕ್ ಇನ್‌ವೆಸ್ಟ್‌ಮೆಂಟ್‌ಎಂಬ ಹೆಸರಿನಲ್ಲಿ ಕೆಕೆಆರ್‌ಪಿಆರ್‌ಒ ಎಂಬ ಅಪ್ಲಿಕೇಷನ್ ಡೌನಲೋಡ್ ಮಾಡಿಸಿ, ಅದರಲ್ಲಿ ಹಣ ಹೂಡಿಕೆ ಮಾಡುವಂತೆ ತಿಳಿಸಿದ್ದಾರೆ. ನಂತರ ತಿಂಗಳಿಗೆ ಶೇ. 500ರಷ್ಟು ಲಾಭ ಕೊಡುವುದಾಗಿ ತಿಳಿಸಿ ವಿವಿಧ ಬ್ಯಾಂಕ್ ಖಾತೆಗಳಿಂದ 73.61 ಲಕ್ಷ ರೂಪಾಯಿ ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.