ಮದ್ದೂರು: ಸದಸ್ಯರಲ್ಲದವರಿಗೆ ಪ್ರವೇಶ ನೀಡಿ ಅಕ್ರಮವಾಗಿ ಜೂಜಾಟ ಆಡಿಸುತ್ತಿದ್ದ ಕ್ಲಬ್‌ವೊಂದರ ಮೇಲೆ ಮಳವಳ್ಳಿ ಗ್ರಾಮಾಂತರ ಪೊಲೀಸರು ದಾಳಿ ಮಾಡಿದ್ದು, 71 ಮಂದಿಯನ್ನು ವಶಕ್ಕೆ ಪಡೆದು 99.970 ರೂ. ಜಪ್ತಿ ಮಾಡಿದ್ದಾರೆ. ರಾಮನಗರ, ತುಮಕೂರು ಹಾಗೂ ಮಂಡ್ಯ ಜಿಲ್ಲೆ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿ ಕ್ಲಬ್ ಸದಸ್ಯರಲ್ಲದವರು ಜೂಜಾಟದಲ್ಲಿ ತೊಡಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ತಾಲೂಕಿನ ನಿಡಘಟ್ಟ ಗ್ರಾಮದ ವರದರಾಜ ರೀಕ್ರಿಯೇಷನ್ ಕ್ಲಬ್ (ಕುಳ್ಳರಾಜ ಕ್ಲಬ್) ಮೇಲೆ ಭಾನುವಾರ ದಾಳಿ ಮಾಡಿರುವ ಮಳವಳ್ಳಿ ಗ್ರಾಮಾಂತರ ವೃತ್ತ ನಿರೀಕ್ಷಕ ಪಿ.ಜಿ.ಮಹೇಶ್ ಹಾಗೂ ಸಿಬ್ಬಂದಿ, ಹಣ ಜಪ್ತಿ ಮಾಡಿದ್ದಾರೆ. ಜೂಜಾಟದಲ್ಲಿ ತೊಡಗಿದ್ದ 71 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.