ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಸಿಟಿ ಕ್ಲಿನಿಕ್ ಕೇಶ್ವಾಪುರ ಶಾಖೆಯಲ್ಲಿ ಮಹಿಳೆಯರಿಗಾಗಿ ಭಾನುವಾರ ಉಚಿತ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಲಾಗಿತ್ತು. ಸುಮಾರು 70ಕ್ಕೂ ಹೆಚ್ಚು ಮಹಿಳೆಯರು ಶಿಬಿರದ ಪ್ರಯೋಜನ ಪಡೆದರು.
ಮಧುಮೇಹ ಪರೀಕ್ಷೆ, ಎಲುಬಿನ ಸಾಂದ್ರತೆ ಪರೀಕ್ಷೆ ನಡೆಸಿ ಸೂಕ್ತ ಸಲಹೆ ನೀಡಲಾಯಿತು. ಉಚಿತವಾಗಿ ಔಷಧಿಗಳನ್ನು ವಿತರಿಸಲಾಯಿತು. ಡಾ. ವಿದ್ಯಾ ಜೋಶಿ, ಡಾ. ಪ್ರಿಯಾ ಜೋಶಿ, ಡಾ. ಪೂಜಾ ಜೋಶಿ ತಪಾಸಣೆ ನಡೆಸಿದರು. ಸಿಟಿ ಕ್ಲಿನಿಕ್ ಆಡಳಿತಾಧಿಕಾರಿ ಪ್ರಕಾಶ ಮಾಡಲಗೇರಿ ಇದ್ದರು.