ಧಾರವಾಡ: ಜಿಲ್ಲೆಯಲ್ಲಿ ಗುರುವಾರ 257 ಕರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 6 ಜನ ಮೃತಪಟ್ಟಿದ್ದಾರೆ. ಒಟ್ಟು ಪ್ರಕರಣಗಳ ಸಂಖ್ಯೆ 6925ಕ್ಕೇರಿದ್ದು, ಈವರೆಗೆ 4337 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2374 ಪ್ರಕರಣಗಳು ಸಕ್ರಿಯವಾಗಿವೆ. 34 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈವರೆಗೆ 214 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಗುರುವಾರ ಪ್ರಕಟಗೊಂಡ ವರದಿಯಲ್ಲಿ ಹುಬ್ಬಳ್ಳಿಯದ್ದೇ ಸಿಂಹಪಾಲು. ಹುಬ್ಬಳ್ಳಿ ನಗರ ಹಾಗೂ ಗ್ರಾಮಾಂತರದ ಸುಮಾರು 60 ಪ್ರದೇಶಗಳಲ್ಲಿ ಪ್ರಕರಣಗಳು ಪತ್ತೆಯಾಗಿದೆ. ಕೆಲ ಪ್ರದೇಶಗಳಲ್ಲಿ ಒಂದಕ್ಕಿಂತ ಹೆಚ್ಚು ಪ್ರಕರಣಗಳೂ ಪತ್ತೆಯಾಗಿವೆ.
ಧಾರವಾಡ ಹಾಗೂ ತಾಲೂಕಿನ ಗ್ರಾಮಾಂತರ ಸೇರಿ 40 ಪ್ರದೇಶಗಳಲ್ಲಿ ಪ್ರಕರಣಗಳು ದೃಢಪಟ್ಟಿವೆ.
ಇನ್ನು ಕಲಘಟಗಿಯ ಮುಕ್ಕಲ್, ಶೀಗಿಗಟ್ಟಿ ತಾಂಡಾ, ದೇವಲಿಂಗಿಕೊಪ್ಪ, ಗಂಜಿಗಟ್ಟಿ ಹೊಸೂರ ಓಣಿ, ಕುಂದಗೋಳದ ಯಲಿವಾಳ, ಶಿರೂರ, ಸ್ಟೇಷನ್ ರಸ್ತೆ ಕಳಸ, ಹಿರೇನರ್ತಿ, ಗುಡೇನಕಟ್ಟಿ, ನಾಡಿಗೇರ ಓಣಿ, ಕುಲಕರ್ಣಿ ಗಲ್ಲಿ, ಕೊಡ್ಲಿವಾಡ, ಬರದ್ವಾಡ, ಬೆನಕನಹಳ್ಳಿ, ಸಂಶಿ, ನವಲಗುಂದ ತಾಲೂಕಿನ ಶಲವಡಿ, ತಲೆಮೊರಬ, ಬೆಳವಟಗಿ, ಗುಮ್ಮಗೋಳ ಪಂಚಾಯಿತಿ ಓಣಿ, ಶಿರಕೋಳ, ಅಣ್ಣಿಗೇರಿಯ ವಿದ್ಯಾನಗರ, ದೇಶಪಾಂಡೆನಗರ, ಜಾಡಗೇರ ಓಣಿ, ದೇಸಾಯಿ ಓಣಿ, ಹೊರಕೇರಿ ಓಣಿ, ಎಸ್ಬಿಐ ಬ್ಯಾಂಕ್ ಹತ್ತಿರ, ಮಜ್ಜಿಗುಡ್ಡ, ಹೊಸಪೇಟೆ ಓಣಿ, ನಲವಡಿ, ಮಣಕವಾಡ, ಅಳ್ನಾವರದ ಅಶೋಕ ರಸ್ತೆ, ಡೋರಿ ಗ್ರಾಮದಲ್ಲಿ ಪ್ರಕರಣಗಳು ಪತ್ತೆಯಾಗಿವೆ.
ಸ್ವಾ್ಯಬ್ ವಾಹನ ನಿಲುಗಡೆ ಸ್ಥಳ
ಧಾರವಾಡ: ಹು-ಧಾ ಅವಳಿನಗರದಲ್ಲಿ ಆ. 14ರಂದು ವಿವಿಧೆಡೆ ಸಂಚಾರಿ ಸ್ವಾ್ಯಬ್ ಸಂಗ್ರಹಣಾ ಕೇಂದ್ರಗಳ ಮೂಲಕ ಕೋವಿಡ್ ತಪಾಸಣೆ ಕಾರ್ಯ ನಡೆಸಲಾಗುತ್ತಿದೆ. ಸೋಂಕಿನ ಲಕ್ಷಣ ಇರುವವರು, ಸೋಂಕಿತರ ಸಂಪರ್ಕ ಹೊಂದಿರುವ ವ್ಯಕ್ತಿಗಳು ಸ್ವಯಂ ಪ್ರೇರಣೆಯಿಂದ ತಪಾಸಣೆ ಮಾಡಿಸಿಕೊಳ್ಳಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೋರಿದೆ.
ಹುಬ್ಬಳ್ಳಿಯ ಕಿಮ್್ಸ, ತತ್ವದರ್ಶ ಆಸ್ಪತ್ರೆ, ಸುಚಿರಾಯು ಆಸ್ಪತ್ರೆ, ವಿವೇಕಾನಂದ ಆಸ್ಪತ್ರೆ ಹಾಗೂ ನನವನಗರದ ಕ್ಯಾನ್ಸರ್ ಆಸ್ಪತ್ರೆ ಆವರಣ. ಧಾರವಾಡ ಸತ್ತೂರಿನ ಎಸ್ಡಿಎಂ ಆಸ್ಪತ್ರೆ, ಜರ್ಮನ್ ಆಸ್ಪತ್ರೆ, ಜ್ಯುಬಿಲಿ ವೃತ್ತ ಬಳಿಯ ಯುನಿಟಿ ಆಸ್ಪತ್ರೆ, ಡಾ.ರಾಮನಗೌಡರ್ ಆಸ್ಪತ್ರೆ ಆವರಣ ಹಾಗೂ ಕಲಘಟಗಿ, ಕುಂದಗೋಳ, ನವಲಗುಂದ ತಾಲೂಕು ಆಸ್ಪತ್ರೆಗಳಲ್ಲೂ ಸ್ವಾ್ಯಬ್ ಸಂಗ್ರಹಣೆ ಕಾರ್ಯ ನಡೆಯಲಿದೆ.
ಬೆಳಗ್ಗೆ 11 ಗಂಟೆಯಿಂದ ಸಂಗ್ರಹಣೆ ಕಾರ್ಯ ನಡೆಯಲಿದೆ. ಜನರು ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಆರೋಗ್ಯ ರಕ್ಷಣೆ ಮಾಡಿಕೊಳ್ಳಬೇಕು ಎಂದು ಪ್ರಕಟಣೆ ತಿಳಿಸಿದೆ.
ಮತ್ತೆ ನೂರು ಬೆಡ್ಗೆ ಸಿದ್ಧತೆ
ಹುಬ್ಬಳ್ಳಿ: ಇಲ್ಲಿನ ಕಿಮ್ಸ್ನಲ್ಲಿ ಈಗಾಗಲೇ 500 ಹಾಸಿಗೆಗಳನ್ನು ಕೋವಿಡ್ ಸೋಂಕಿತರಿಗೆ ವ್ಯವಸ್ಥೆ ಮಾಡಿದ್ದು, ಮತ್ತೆ ನೂರು ಹಾಸಿಗೆ ಸೇರಿಸಲು ಸಿದ್ಧತೆ ನಡೆದಿದೆ.
ದಿನೇದಿನೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಜ್ವರ, ಕೆಮ್ಮು ಹಾಗೂ ನೆಗಡಿಯ ಜೊತೆಗೆ ತೀವ್ರ ತರಹದ ಉಸಿರಾಟದ ಸಮಸ್ಯೆ ಇರುವ ಪ್ರಕರಣಗಳು ಜಾಸ್ತಿಯಾಗಿವೆ. ಇವರನ್ನೆಲ್ಲ ಕೋವಿಡ್ ಪರೀಕ್ಷೆಗೊಳಪಡಿಸಿದಾಗ ಹಲವರಲ್ಲಿ ಪಾಸಿಟಿವ್ ಬರುತ್ತಿವೆ. ಹಾಗಾಗಿ ಬೆಡ್ಗಳ ಸಂಖ್ಯೆ ಹೆಚ್ಚಿಸುವ ಅಗತ್ಯವಿದೆ ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ. ಇದೇ ವರದಿಯನ್ನು ಆಧರಿಸಿ ಕಿಮ್ಸ್ನಲ್ಲಿ ಇನ್ನಷ್ಟು ಬೆಡ್ಗಳ ಸಂಖ್ಯೆಯನ್ನು ಹೆಚ್ಚಿಸುವ ಚಿಂತನೆ ನಡೆದಿದೆ. ಸೂಪರ್ ಸ್ಪೆಷಾಲಿಟಿ ಹಾಗೂ ಕಿಮ್ಸ್ನ ಹಳೆಯ ಕಟ್ಟಡದಲ್ಲಿ ತಲಾ 250 ಬೆಡ್ಗಳ ವ್ಯವಸ್ಥೆ ಮಾಡಲಾಗಿದೆ. ಇನ್ನೂ 100 ಬೆಡ್ಗಳನ್ನು ಯಾವ ಕಡೆ ಹಾಕಿಸಬೇಕು ಎಂಬ ಬಗ್ಗೆ ಇನ್ನೆರಡು ದಿನಗಳಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಉಪ ವೈದ್ಯಕೀಯ ಅಧೀಕ್ಷಕ ಡಾ. ರಾಜಶೇಖರ ದ್ಯಾಬೇರಿ ತಿಳಿಸಿದ್ದಾರೆ.
EndFragment