ಹಾಸನ: ನಗರದ ಕೆಹೆಚ್‌ಬಿ ಕಾಲೋನಿಯ ಮನೆಯೊಂದರ ಡೋರ್‌ಲಾಕ್ ಮುರಿದು ರೂಮಿನ ಬೀರುವಿನಲ್ಲಿದ್ದ 7 ಲಕ್ಷ ಬೆಲೆಯ ಚಿನ್ನಾಭರಣ ಹಾಗೂ 15 ಲಕ್ಷ ನಗದು ಕಳವು ಮಾಡಲಾಗಿದೆ.
ಡಿ.5 ರಂದು ಬೆಳಿಗ್ಗೆ 11.45 ಗಂಟೆಯಲ್ಲಿ ಕೆಹೆಚ್‌ಬಿ ಕಾಲೋನಿಯ 28ನೇ ಕ್ರಾಸ್ ವಾಸಿ ಸಚಿನ್ ಹೆಚ್.ಆರ್ ಎಂಬುವರು ತಮ್ಮ ಪತ್ನಿಯೊಂದಿಗೆ ಮನೆಗೆ ಬೀಗ
ಹಾಕಿಕೊಂಡು ಟೌನ್‌ಗೆ ಹೋಗಿದ್ದರು. ಸಂಜೆ 5.35 ಗಂಟೆಗೆ ಮನೆಗೆ ಬಂದಾಗ ಕಳ್ಳರು ಮನೆಯ ಡೋರ್‌ನ್ನು ಯಾವುದೋ ಆಯುಧದಿಂದ ಮೀಟಿ ಮನೆಯೊಳಗೆ
ಪ್ರವೇಶ ಮಾಡಿ ಮನೆಯ ರೂಂ.ಗಳ ವಾರ್ಡ್ ರೂಬ್‌ನಲ್ಲಿದ್ದ 38 ಗ್ರಾಂ ತೂಕದ ಚಿನ್ನದ ಸರ, 32 ಗ್ರಾಂ ತೂಕದ ಚಿನ್ನದ ಬಳೆ, 15 ಗ್ರಾಂ ತೂಕದ ಚಿನ್ನದ ಓಲೆ,
5 ಗ್ರಾಂ ತೂಕದ ಡೈಮಂಡ್ ಓಲೆ, 15 ಗ್ರಾಂ ತೂಕದ ಚಿನ್ನದ ಬಳೆ ಸೇರಿ ಒಟ್ಟು 7 ಲಕ್ಷ ರೂ. ಬೆಲೆಯ ಚಿನ್ನಾಭರಣ ಹಾಗೂ ಇನ್ನೊಂದು ರೂಮಿನ ವಾರ್ಡ್ ರೂಬ್
ನಲ್ಲಿಟ್ಟದ್ದ 15 ಸಾವಿರ ಹಣವನ್ನು ಕಳುವು ಮಾಡಿಕೊಂಡು ಹೋಗಿದ್ದಾರೆ.
ಸಚಿನ್ ನೀಡಿದ ದೂರಿನ ಮೇರೆಗೆ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.