ಯಾದಗಿರಿ: ಜಿಲ್ಲೆಯಲ್ಲಿ ರೈತರ ಪಂಪಸೆಟ್ ಗಳಿಗೆ ದಿನದಲ್ಲಿ ಸತತ 7 ಗಂಟೆ ವಿದ್ಯುತ್ ನೀಡುವಂತೆ ಜಯ ಕರ್ನಾಟಕ ರಕ್ಷಣಾ ಸೇನೆ ರಾಜ್ಯ ಸಮಿತಿ ವತಿಯಿಂದ ಒಂದು ದಿನದ ಪ್ರತಿಭಟನೆ ನಡೆಸಿ ಸಕರ್ಾರಕ್ಕೆ ಒತ್ತಾಯಿಸಲಾಯಿತು.
ನಗರದ ಜೆಸ್ಕಾಂ ಇಇ ಕಚೇರಿ ಮುಂಭಾಗದಲ್ಲಿ ಜಮಾಯಿಸಿದ ಸೇನೆ ಕಾರ್ಯಕರ್ತರು ಪ್ರತಿಭಟನಾ ಧರಣಿ ನಡೆಸಿ ಸರ್ಕಾರ ಕ್ರಮವನ್ನು ವಿರೋಧಿಸಿ ಕೂಡಲೇ ಕನಿಷ್ಟ 7 ತಾಸು ಗುಣಮಟ್ಟದ ವಿದ್ಯುತ್ ಪೂರೈಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸೇನೆ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಜಲ್ಲಪ್ಪನೋರ್ ಮಾತನಾಡಿ, ಯಾದಗಿರಿ ಜಿಲ್ಲೆಯಲ್ಲಿ ಸರ್ಕಾರದಿಂದ ವಿದ್ಯುತ್ ಸಮರ್ಪಕವಾಗಿ ನೀಡುತ್ತಿಲ್ಲ. ಸರ್ಕಾರ ದ ಆದೇಶವೂ 7 ಗಂಟೆಗಳ ಕಾಲ ನೀಡಬೇಕೆಂದು ಇದೆ ಆದರೆ ಈಗ ಕೇವಲ 5 ಗಂಟೆಗಳ ಕಾಲ ವಿದ್ಯುತ್ ಕೊಡಲಾಗುತ್ತದೆ, ಆ ವಿದ್ಯುತ್ ಕೂಡಾ ಸಮರ್ಪಕವಾಗಿ ದೊರೆಯುತ್ತಿಲ್ಲ. ಇದರಿಂದ ರೈತರು ಬೆಳೆದಿರುವ ಬೆಳೆಗಳಿಗೆ ವಿದ್ಯುತ್ ಇಲ್ಲದೇ, ನೀರು ಬಿಡದೇ ಇದ್ದರಿಂದ ಬೆಳೆಗಳು ಒಣಗಿ ಹೋಗಿರುತ್ತವೆ ಎಂದು ದೂರಿದರು.
ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ ಮಾತನಾಡಿ, ಈಗಾಗಲೇ ಮಳೆಗಾಲ ಕೈ ಕೊಟ್ಟು, ಸಂಪೂರ್ಣ ಬೆಳೆಗಳೂ ನಾಶದ ಅಂಚಿನಲ್ಲಿವೆ. ಬೆಳೆಗಳಾದ ಮೆಣಸಿನ ಕಾಯಿ, ಶೇಂಗಾ, ಛತ್ತ ಹತ್ತಿ ಈ ಬೆಳೆಗಳಿಗೆ ನೀರಿಲ್ಲದೇ ಬಹಳ ತೊಂದರೆ ಉಂಟಾಗಿದೆ. ಈಗ ಸರ್ಕಾರ ವು 5 ಗಂಟೆ ಮಾತ್ರ ವಿದ್ಯುತ್' ನೀಡುತ್ತೇವೆಂದು ಘೋಷಣೆ ಮಾಡಿದ್ದು, ಮೊದಲೇ ಹೇಳಿದ್ದರೆ ರೈತರು ಕಡಿಮೆ ಪ್ರಮಾಣದಲ್ಲಿ ಬೆಳೆಗಳು ಬಿತ್ತುತ್ತಿದ್ದೇವು. ಈಗ ರೈತರ ಸ್ಥಿತಿ ಹೇಳತೀರದಂತಾಗಿದೆ.
ವಿಷ ಕುಡಿದು ಆತಹತ್ಯೆ ಮಾಡುವ ಸ್ಥಿತಿ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅನಧಿಕೃತವಾಗಿ ಲೋಡ್ ಶೆಡ್ಡಿಂಗ್, ಹೇರಿಕೆ ಮಾಡಿದ್ದನ್ನು ವಾಪಾಸ್ ಪಡೆಯಬೇಕು, ಇದರಿಂದ ವ್ಯಾಪಾರಕ್ಕೆ, ಕೈಗಾರಿಕೆಗಳಿಗೆ ಭಾರಿ ತೊಂದರೆಯಾಗಿದೆ. ಆದ ಕಾರಣ: ತಾವು ದಯಮಾಡಿ ರೈತರಿಗೆ ಅವರ ಬೆಳೆಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಸತತ 7 ಗಂಟೆಗಳ ಕಾಲ ವಿದ್ಯುತ್ ನೀಡಿ, ರೈತರಿಗೆ ಸಹಕಾರ ನೀಡಬೇಕೆಂದು ಈ ಮೂಲಕ ನಮ್ಮ ಸಂಘಟನೆಯಿಂದ ಪ್ರತಿಭಟನೆ ಮೂಲಕ ಮನವಿ ಮಾಡಿಕೊಳ್ಳುತ್ತೇವೆ. ಒಂದು ವೇಳೆ ತಾವು ರೈತರಿಗೆ 7 ಗಂಟೆಗಳ ಕಾಲ ಸತತವಾಗಿ ವಿದ್ಯುತ್ ನೀಡದೇ ಹೋದರೆ ಮುಂದಿನ ದಿನಗಳಲ್ಲಿ, ಉಗ್ರವಾದ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.