ಜಿಲ್ಲೆ

7 ಜನರ ಮೇಲೆ ಮಸೀದಿ ಸದಸ್ಯರ ಹಲ್ಲೆ

reportermys

ಆಲೂರು: ತಾಲೂಕಿನ ಪಾಳ್ಯ ಮಸೀದಿ ಸಮಿತಿಯ ನಡೆಯನ್ನ ಪ್ರಶ್ನಿಸಿದ ಕುಟುಂಬದವರ ಮೇಲೆ ಗುಂಪು ಹಲ್ಲೆ ನಡೆದಿದ್ದು. ಇಬ್ಬರು ಗಾಯಗೊಂಡು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ನಡೆದಿದೆ.

ತಾಲೂಕಿನ ಪಾಳ್ಯ ಹೋಬಳಿ ಚನ್ನಹಳ್ಳಿ ಗ್ರಾಮದ ಸಲೀಂ ಕುಟುಂಬದ ಮೇಲೆ ಬದ್ರಿಯಾ ಜುಮಾ ಮಸೀದಿಯಾ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಮುಸ್ಲಿಂ ಸಮುದಾಯದ ಮಹಿಳೆಯರು ಶುಕ್ರವಾರ ಬೆಳಗ್ಗೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಲ್ಲಿ ಸಲೀಂ(30) ಹಾಗೂ ಪತ್ನಿ ರಶೀದಾ (29) ಮಕ್ಕಳಾದ ಫಾತಿಮಾಸನ(10) ಸೀಜ,(8) ಸುಹಾಲ್(4) ಹಾಗೂ ಮನೆ ಕೆಲಸಕ್ಕೆ ಬಂದಿದ್ದ ಮಂಜೇಗೌಡ (60), ಇಬ್ರಾಹಿಂ(55) ಮರಣಾಂತಿಕ ಹಲ್ಲೆ ನಡೆಸಿ ಸಲೀಂ ಸಹೋದರಿ ಜಮೀಲಾ ರವರಿಗೆ ಕೊಲೆ ಬೆದರಿಕೆಯನ್ನು ಹಾಕಿರುತ್ತಾರೆ.

ಸದ್ಯ ಸಲೀಂ ತನ್ನ ಪತ್ನಿ ರಶೀದಾ ಕ್ಕಳನ್ನು ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಹೋಗಿದ್ದಾರೆ ಮನೆ ಕೆಲಸಕ್ಕೆ ಬಂದಿದ್ದ ಮಂಜೇಗೌಡ(60) ಹಾಗೂ ಇಬ್ರಾಹಿಂ(55) ಇಬ್ಬರು ಇನ್ನೂ ಕೂಡ ಆಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಸೀದಿಯ ಕಾರ್ಯದರ್ಶಿ ರಿಯಾಝ್ ಮೇಲೆ ಪ್ರಕರಣ ದಾಖಲಾಗಿರುತ್ತದೆ.