ಮಾದಕವಸ್ತು 
ಜಿಲ್ಲೆ

ಮಂಗಳೂರು ಮಾದಕವಸ್ತು ಸೇವನೆ 7 ಯುವಕರ ಬಂಧನ

ಮಂಗಳೂರು: ನಗರ ವ್ಯಾಪ್ತಿಯಲ್ಲಿ ವಿವಿಧ ಕಡೆ ಮಾದಕವಸ್ತು ಸೇವಿಸಿದ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಜಪ್ಪಿನಮೊಗರು ಕಡೇಕಾರ್ ನೇತ್ರಾವತಿ ಸೇತುವೆ ಕೆಳಗೆ ಮಾದಕವಸ್ತು ಸೇವನೆ ಮಾಡುತ್ತಿದ್ದ ತೊಕ್ಕೊಟ್ಟು ಕಾಪಿಕಾಡ್‌ನ ಮಹತ್ವೇಶ್ (23), ಬೋಳೂರುನ ಆಶಿತ್ (23), ಕಾವೂರು ಗಾಂಧಿನಗರದ ತ್ರಿಶೂಲ್ (26) ಅವರನ್ನು ವಶಕ್ಕೆ ಪಡೆದು ಪರೀಕ್ಷಿಸಿದಾಗ ಮಾದಕವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ. ಇವರ ವಿರುದ್ಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾವೂರು ಪಿಎಸ್‌ಐ ಮಲ್ಲಿಕಾರ್ಜುನ್ ಬಿರಾದಾರ್ ಅವರು ಮಾದಕವಸ್ತು ಪ್ರಕರಣದ ತನಿಖೆ ಸಂದರ್ಭ ಕಸಬಾ ಬೆಂಗ್ರೆಯ ಮಹಮ್ಮದ್ ಫಯಾಜ್ (36) ಎಂಬಾತನನ್ನು ಕರೆಸಿ ವಿಚಾರಣೆ ನಡೆಸಿದಾಗ ಆತ ಮಾದಕವಸ್ತು ಸೇವನೆ ಮಾಡಿರುವುದು ಕಂಡು ಬಂದಿದೆ. ವೈದ್ಯಕೀಯ ತಪಾಸಣೆ ನಡೆಸಿದಾಗ ಮಾದಕವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ. ಆತನ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಪಣಂಬೂರು ಗ್ರಾಮದ ಕುದುರೆಮುಖ ಜಂಕ್ಷನ್ ಬಳಿ ಮಾದಕವಸ್ತು ಸೇವಿಸಿ ನಶೆಯಲ್ಲಿದ್ದಂತೆ ಕಂಡು ಬಂದ ಮಂಚಿಲಾ ರೋಡ್‌ನ ತಂಗಲ್ ಹೌಸ್‌ನ ಸಯ್ಯದ್ ಅಹಮ್ಮದ್ ಕಬೀರ್ (27) ಎಂಬಾತನನ್ನು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆ ನಡೆಸಿದಾಗ ಮಾದಕವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ.
ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಎಮ್ಮೆಕೆರೆ ಮೈದಾನದ ಬಳಿ ಮಾದಕವಸ್ತು ಸೇವನೆ ಮಾಡಿದ ವಾಮಂಜೂರಿನ ಕುಟ್ಟಿಪಲ್ಕೆಯ ಸಚಿನ್ (25) ಎಂಬಾತನನ್ನು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆ ನಡೆಸಿದಾಗ ಮಾದಕವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ.
ಪಾಂಡೇಶ್ವರ ಠಾಣಾ ವ್ಯಾಪ್ತಿಯ ಮಾರ್ಗನ್ಸ್‌ಗೇಟ್ ಬಳಿ ಮಾದಕವಸ್ತು ಸೇವನೆ ಮಾಡಿದ್ದ ಅತ್ತಾವರದ ಶ್ರವಣ್ ಶೆಟ್ಟಿ (21) ಎಂಬಾತನನ್ನು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆ ನಡೆಸಿದಾಗ ಮಾದಕವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ.