ಜಿಲ್ಲೆ

7 ಸಾವಿರ ಮಂದಿ ಗ್ಯಾರಂಟಿಯಿಂದ ವಂಚಿತ : ಸಿಪಿಐಎಂ ಜಿಲ್ಲಾ ಸಮಿತಿ ಸದಸ್ಯ ಸುಕುವಾರ್ ತೊಕ್ಕೊಟ್ಟು ಆಕ್ರೋಶ

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಪಾನ್ ಕಾರ್ಡ್ ಲಿಂಕ್ ಸಂದರ್ಭ ಒಂದು ಸಾವಿರ ರೂ. ಆದಾಯ ತೆರಿಗೆ ಪಾವತಿಸಿದ್ದನ್ನೇ ನೆಪವಾಗಿಸಿ ಸರ್ಕಾರ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಿರುವುದರಿಂದ ತಾಲೂಕಿನಲ್ಲಿ ಒಂದು ತಿಂಗಳ ಅವಧಿಯಲ್ಲಿ ಏಳು ಸಾವಿರಕ್ಕೂ ಹೆಚ್ಚು ಜನ ಗ್ಯಾರಂಟಿ ಯೋಜನೆಯಿಂದ ವಂಚಿತರಾಗಿದ್ದಾರೆ. ಪ್ರತೀ ತಾಲೂಕಿನ ಗ್ಯಾರಂಟಿ ಅನುಷ್ಠಾನ ಸಮಿತಿ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸುವ ಕೆಲಸ ವಾಡಬೇಕಿದೆ ಎಂದು ಸಿಪಿಐಎಂ ಜಿಲ್ಲಾ ಸಮಿತಿ ಸದಸ್ಯ ಸುಕುವಾರ್ ತೊಕ್ಕೊಟ್ಟು ಹೇಳಿದರು.

ಪಾನ್ - ಆಧಾರ್ ಕಾರ್ಡ್‌ಗೆ ಲಿಂಕ್ ವಾಡಲು ಆದ ವಿಳಂಬಕ್ಕೆ ದಂಡ ಕಟ್ಟಿದ ಅಸಂಖ್ಯಾತ ಬಿಎಪಿಎಲ್ ಕಾರ್ಡ್‌ಗಳನ್ನು ರದ್ದು ವಾಡಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬೇಜವಾಬ್ದಾರಿ ವರ್ತನೆ ವಿರೋಧಿಸಿ, ರದ್ದುಗೊಳಿಸಿದ ಬಿಪಿಎಲ್ ಕಾರ್ಡ್‌ಗಳನ್ನು ಕೂಡಲೇ ವಾಪಸ್ ನೀಡುವಂತೆ ಒತ್ತಾಯಿಸಿ ಗುರುವಾರ ನಾಟೆಕಲ್‌ನಲ್ಲಿರುವ ಉಳ್ಳಾಲ ತಾಲೂಕು ಕಚೇರಿಯ ಮುಂಭಾಗದಲ್ಲಿ ಸಿಪಿಐಎಂ ಉಳ್ಳಾಲ ಮತ್ತು ಮುಡಿಪು ವಲಯ ಸಮಿತಿಯ ಜಂಟಿ ಆಶ್ರಯದಲ್ಲಿ ನಡೆದ ಪ್ರತಿಭಟನೆ ಉದ್ದೇಶಿಸಿ ವಾತನಾಡಿದರು.

ಸಿಪಿಐಎಂ ಜಿಲ್ಲಾ ಸದಸ್ಯ ಸುನಿಲ್ ಬಜಾಲ್ ವಾತನಾಡಿ, ಕಳೆದ 21 ವರ್ಷಗಳಲ್ಲಿ ಅದೆಷ್ಟು ಮುಖ್ಯಮಂತ್ರಿ, ಸಚಿವ, ಶಾಸಕರು ಬಂದರೂ ಸರ್ವೇ ಬಿಟ್ಟರೆ ಬೇರೇನೂ ವಾಡಿಲ್ಲ. ಪಡಿತರ ಚೀಟಿ ಅವ್ಯವಸ್ಥೆ ಸರಿಪಡಿಸಲು ಸಾಧ್ಯವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉಳ್ಳಾಲ ತಾಲೂಕು ಆಗಿ ಎರಡು ವರ್ಷಗಳಾದರೂ ಕಚೇರಿ ಫಲಕಕ್ಕೆ ವಾತ್ರ ಸೀಮಿತವಾಗಿದೆ. ಇಲ್ಲಿ ಸರಿಯಾದ ಅಧಿಕಾರಿಗಳಾಗಲೀ, ವಾಹನ ನಿಲುಗಡೆ ವ್ಯವಸ್ಥೆ, ಸರಿಯಾದ ಕಟ್ಟಡ, ಶೌಚಗೃಹ ಇಲ್ಲ. ಮುಂದಿನ ದಿನಗಳಲ್ಲಿ ಬರ್ತೀವಿ ಅದನ್ನೂ ಕೇಳ್ತೀವಿ ಎಂದು ಎಚ್ಚರಿಸಿದರು.

ಪದ್ಮಾವತಿ ಶೆಟ್ಟಿ, ಕೃಷ್ಣಪ್ಪ ಸಾಲ್ಯಾನ್, ಜಯಂತ್ ನಾಯಕ್, ರಿರಝ್ವಾನ್ ಹರೇಕಳ, ಸುಂದರ ಕುಂಪಲ, ಪ್ರಮೋದಿನಿ ತೊಕ್ಕೊಟ್ಟು, ಇಬ್ರಾಹಿಂ ಮದಕ, ರರಝಾಕ್ ಮೊಂಟೆಪದವು, ರಾಮಚಂದ್ರ ಪಜೀರ್, ಅಶ್ಫಕ್ ಅಲೇಕಳ, ಅಬೂಬಕ್ಕರ್ ಜಲ್ಲಿ, ಶೇಖರ್ ಕುತ್ತಾರ್, ಜನಾರ್ದನ್ ಮೊದಲಾದವರಿದ್ದರು.

ಮುಡಿಪು ವಲಯ ಸಿಪಿಐಎಂ ಕಾರ್ಯದರ್ಶಿ ರಫೀಕ್ ಹರೇಕಳ ಸ್ವಾಗತಿಸಿದರು.

ಪಾರ್ಕಿಂಗ್ ಕಿರಿಕ್

ಪ್ರತಿಭಟನೆಯಲ್ಲಿ ಭಾಗವಹಿಸಲು ಬಂದಿದ್ದ ಒಂದಿಬ್ಬರು ತಮ್ಮ ದ್ವಿಚಕ್ರ ವಾಹನವನ್ನು ಸನಿಹದಲ್ಲೇ ಇರುವ ರಸ್ತೆಬದಿ ನಿಲ್ಲಿಸಿದ್ದರು. ಈ ಸಂದರ್ಭ ಅಲ್ಲಿಗೆ ಆಗಮಿಸಿದ ಜಮೀನಿನ ಮಾಲೀಕ ಇದು ಖಾಸಗಿ ರಸ್ತೆ, ಇಲ್ಲಿಂದ ವಾಹನ ತೆಗೆಯುವಂತೆ ಏರು ಧ್ವನಿಯಲ್ಲಿ ಹೇಳಿದರು. ಇದೇ ವೇಳೆ ಪೊಲೀಸ್ ಪೇದೆಯೊಬ್ಬರೂ ದ್ವಿಚಕ್ರ ವಾಹನ ನಿಲ್ಲಿಸಲು ಮುಂದಾದಾಗ ಅವರಿಗೂ ಜಮೀನಿನ ಮಾಲೀಕ ಗದರಿಸಿದರು. ಇದರಿಂದ ಆಕ್ರೋಶಗೊಂಡ ಸಿಪಿಐಎಂ ಮುಖಂಡರು ಮತ್ತು ಕಾರ್ಯಕರ್ತರು ಜಮೀನು ಮಾಲೀಕನನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಜಮೀನು ಮಾಲೀಕರ ಕಡೆಯಿಂದಲೂ ಜನ ಜಮಾಯಿಸಿ ವಾತಿನ ಚಕಮಕಿ ನಡೆದು ಹೊಡೆದಾಟದ ಹಂತ ತಲುಪಿತು. ಸ್ಥಳದಲ್ಲಿದ್ದ ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಗೊಂಡಿತು.