ಮಂಗಳೂರು: ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮಾದಕ ವಸ್ತು ಸೇವನೆ ಪ್ರಕರಣದಲ್ಲಿ ಒಟ್ಟು 7 ಮಂದಿಯಲ್ಲಿ ಬಂಧಿಸಲಾಗಿದೆ.
ಸುರತ್ಕಲ್ ಠಾಣೆ ವ್ಯಾಪ್ತಿಯ ಕಾನ ಜಂಕ್ಷನ್ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಅಕ್ಷಯ್ ಪುರುಷೋತ್ತಮ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಮಾತುಗಳು ತೊದಲುತ್ತಿದ್ದು, ಕಣ್ಣುಗಳು ನಶೆಯಲ್ಲಿದಂತೆ ಕಂಡು ಬಂದಿದ್ದು, ಮಾದಕ ವಸ್ತು ಸೇವಿಸಿರುವುದನ್ನು ಒಪ್ಪಿಕೊಂಡಿದ್ದಾನೆ. ವೈದ್ಯಕೀಯರ ಪರೀಕ್ಷೆಗೆ ಒಳಪಡಿಸಿದಾಗ ಮಾದಕ ವಸ್ತು ಸೇವನೆ ದೃಢಪಟ್ಟಿದೆ.
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ಬಳಿಕ ಮಾದಕ ವಸ್ತು ಸೇವನೆ ಮಾಡಿದ್ದ ಕಾವೂರು ಪಳನೀರು ನಿವಾಸಿ ಸಾನ್ವಿತ್ ಕೆ. (19) ಎಂಬಾತನನ್ನು ಪಾಂಡೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೋಡಿಕಲ್ ಬಸ್ ಸ್ಟಾಪ್ ಬಳಿ ಮಾದಕವಸ್ತು ಬೆರೆಸಿದ್ದ ಸಿಗರೇಟು ಸೇವನೆ ಮಾಡಿದ್ದ ಕೋಡಿಕಲ್ ಶೇಡಿಗುರಿ ನಿವಾಸಿ ತುಶಾಂತ್ ಕಾಂತ್ (32) ಮತ್ತು ಅಮ್ಮುಂಜೆ ನಿವಾಸಿ ಕ್ರಿತೇಶ್ (22) ಎಂಬಿಬ್ಬರನ್ನು ಉರ್ವ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪಡೀಲ್ ಕೊಡಕ್ಕಲ್ ಬಳಿ ಮಾದಕ ವಸ್ತು ಸೇವಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಅರ್ಕುಳ ಮೇರ್ಲಪದವು ನಿವಾಸಿ ದೀಪೇಶ್ (25) ಮತ್ತು ಕಂಕನಾಡಿ ವೆಲೆನ್ಸಿಯಾದ ಮೊಹಿತ್ (25) ಎಂಬಿಬ್ಬರನ್ನು ಕಂಕನಾಡಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕುತ್ತಾರು ಜಂಕ್ಷನ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಸೇವಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಉಳ್ಳಾಲ ಕಡಪರ ಸುಭಾಷ್ ನಗರ ನಿವಾಸಿ ಅಬ್ದುಲ್ ಸಮೀರ್ (35) ಎಂಬಾತನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಮಾದಕ ವಸ್ತು ಸೇವನೆ ದೃಢಪಟ್ಟಿದ್ದು, ಎನ್ ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.