ಜಿಲ್ಲೆ

ಶಿಡ್ಲಘಟ್ಟ ನಗರಸಭೆ ಕೈನ 7 ಸದಸ್ಯರು ಅನರ್ಹ

 ಜಿಲ್ಲಾಧಿಕಾರಿ ನ್ಯಾಯಾಲಯ ಆದೇಶ | ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಜೆಡಿಎಸ್‌ಗೆ ಮತ

ಶಿಡ್ಲಘಟ್ಟ: ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಸಿ ಜೆಡಿಎಸ್ ಅಭ್ಯರ್ಥಿಗೆ ಮತ ಹಾಕಿದ್ದ ಕಾಂಗ್ರೆಸ್‌ನ 7 ಸದಸ್ಯರನ್ನು ಅನರ್ಹಗೊಳಿಸಿ ಜಿಲ್ಲಾಧಿಕಾರಿಗಳ ನ್ಯಾಯಾಲಯ ಆದೇಶ ಹೊರಡಿಸಿದೆ.

ಕಳೆದ 2024ರ ಸೆಪ್ಟೆಂಬರ್ 5ರಂದು ಶಿಡ್ಲಘಟ್ಟ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಜೆಡಿಎಸ್ ಅಭ್ಯರ್ಥಿಗೆ ಮತ ಹಾಕಿದ್ದ ಕಾಂಗ್ರೆಸ್‌ನ 7 ಸದಸ್ಯರ ವಿರುದ್ಧ ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ ಹಾಗೂ ನಗರಸಭೆ ಸದಸ್ಯ ಎಂ.ಶ್ರೀನಿವಾಸ್ ಜಿಲ್ಲಾಧಿಕಾರಿಗಳ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯ ಸೆ.28ರ ಸೋಮವಾರ 7ಸದಸ್ಯರ ಸದಸ್ಯತ್ವವನ್ನು ಅನರ್ಹಗೊಳಿಸಿ ಆದೇಶಿಸಿದೆ.

ಅನರ್ಹಗೊಂಡವರು

ಶಿಡ್ಲಘಟ್ಟ ನಗರಸಭೆ 3ನೇ ವಾರ್ಡ್‌ನ ಸದಸ್ಯೆ ಎಸ್.ಚಿತ್ರಾ ಮನೋಹರ್, 10ನೇ ವಾಡ್‌ರ್ರ್ನ ಸದಸ್ಯ ಎಸ್.ಎಂ.ಮಂಜುನಾಥ್, 11ನೇ ವಾರ್ಡ್‌ನ ಎಲ್.ಅನಿಲ್‌ಕುಮಾರ್, 16ನೇ ವಾರ್ಡ್‌ನ ಎನ್. ಕೃಷ್ಣಮೂರ್ತಿ, 22ನೇ ವಾರ್ಡ್‌ನ ಟಿ.ಮಂಜುನಾಥ್, 28ನೇ ವಾರ್ಡ್‌ನ ಜಬೀಉಲ್ಲಾ ಮತ್ತು 7ನೇ ವಾರ್ಡ್‌ನ ಶಿವಮ್ಮ ಮುನಿರಾಜು ಅನರ್ಹಗೊಂಡವರು.