ಜಿಲ್ಲೆ

ಮೂರು ಪ್ರತ್ಯೇಕ ಕಳ್ಳತನ ಪ್ರಕರಣಗಳಲ್ಲಿ 7 ಲ್ಯಾಪ್‌ಟಾಪ್ ಮತ್ತು 2 ಮೊಬೈಲ್ ಫೋನ್ ಕಳ್ಳತನ

ಮೈಸೂರು: ನಗರದಲ್ಲಿ ಮೂರು ಪ್ರತ್ಯೇಕ ಕಳ್ಳತನ ಪ್ರಕರಣಗಳಲ್ಲಿ 7 ಲ್ಯಾಪ್‌ಟಾಪ್ ಮತ್ತು 2 ಮೊಬೈಲ್ ಫೋನ್ ಕಳ್ಳತನವಾಗಿರುವ ಬಗ್ಗೆ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣ-1: ಹೆಬ್ಬಾಳಿನಲ್ಲಿ ವಾಸವಿರುವ ಹಾಗೂ ಖಾಸಗಿ ಕಂಪನಿ ಉದ್ಯೋಗಿ ಶಮಂತ್ ವಾಸವಿದ್ದ ಬಾಡಿಗೆ ಕೊಠಡಿಯಲ್ಲಿ ಮೂರು ಲ್ಯಾಪ್‌ಟಾಪ್ ಮತ್ತು 1 ಮೊಬೈಲ್ ಕಳವಾಗಿದೆ.

ಪ್ರಕರಣ-2: ಹೆಬ್ಬಾಳು 1ನೇ ಹಂತದ ಕೊಠಡಿಯೊಂದರಲ್ಲಿ ವಾಸವಿದ್ದ ಹಾಗೂ ಖಾಸಗಿ ಕಂಪನಿ ಉದ್ಯೋಗಿಗಳಾಗಿರುವ ಪ್ರಮೋದ್ ಕೊಠಡಿಯಲ್ಲಿ ಇಲ್ಲದ ವೇಳೆ ಅಲ್ಲಿದ್ದ 2 ಲ್ಯಾಪ್‌ಟಾಪ್ ಹಾಗೂ ಒಂದು ಮೊಬೈಲ್ ಕಳವು ಮಾಡಲಾಗಿದೆ.

ಪ್ರಕರಣ-3: ಹೆಬ್ಬಾಳು ಮಾದೇಗೌಡ ವೃತ್ತದ ಬಳಿ ಬಾಡಿಗೆ ಕೊಠಡಿಯಲ್ಲಿ ವಾಸವಿದ್ದ ಸೆಲ್ವಂ ಗಣಪತಿ, ಹೊರಗೆ ತೆರಳಿದ್ದ ವೇಳೆ ಕೊಠಡಿಗೆ ನುಗ್ಗಿರುವ ಖದೀಮರು ಅಲ್ಲಿದ್ದ 2 ಲ್ಯಾಪ್‌ಟಾಪ್‌ಗಳನ್ನು ಕಳುವು ಮಾಡಿದ್ದಾರೆ.