ಬಂಗಾರಪೇಟೆ: ಬೆಂಗಳೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ 13ನೇ ರಾಷ್ಟ್ರೀಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಪಟ್ಟಣದ ಜಪಾನ್ ಶಿಟೋ ರಾಯ್ ಕರಾಟೆ ಡೊ -ಇಂಡಿಯಾ ಶಾಲೆಯ 8 ಮಂದಿ ಭಾಗವಹಿಸಿ ಚಿನ್ನ ಮತ್ತು ಬೆಳ್ಳಿ ಪದಕ ಪಡೆದಿದ್ದಾರೆ ಎಂದು ಹಿರಿಯ ತರಬೇತುದಾರ ರಾಜು ತಿಳಿಸಿದರು.
ಪಟ್ಟಣದ ಎಪಿಎಂಸಿ ಬಳಿಯ ಶಾಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಶಸ್, ಧನುಷ್, ಅಕ್ಷಯ್ಗೌಡ, ಶಶಾಂತ, ರಿಯಾನ್, ನಿತಿನ್, ಪೂರ್ವಿಕಾ, ಆದಮ್ ಎಂಬುವ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ, 7 ಚಿನ್ನ ಹಾಗೂ 1 ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. ಕಠಿಣ ಸ್ಪರ್ಧೆಗಳ ನಡುವೆಯೂ, ಬಂಗಾರಪೇಟೆಯ ಮಕ್ಕಳು ಸಾಧನೆ ಮಾಡಿದ್ದಾರೆ ಎಂದರು. ಸಹಾಯಕ ತರಬೇತುದಾರರಾದ ಸೌಮ್ಯಾ, ದಾಮೊಧರರೆಡ್ಡಿ ಇದ್ದರು.