ಜಿಲ್ಲೆ

ಬಿ.ಜಿ.ಪುರ ಸಹಕಾರ ಸಂಘಕ್ಕೆ 7.7 ಲಕ್ಷ ರೂ.ನಿವ್ವಳ ಲಾಭ

ಮಳವಳ್ಳಿ: ತಾಲೂಕಿನ ಬಿ.ಜಿ.ಪುರ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘದ 2023-24ನೇ ಸಾಲಿನಲ್ಲಿ 7.72.043 ರೂ.ನಿವ್ವಳ ಲಾಭ ಬಂದಿದೆ ಎಂದು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ನಂಜುಂಡಸ್ವಾಮಿ ತಿಳಿಸಿದರು.


ಗ್ರಾಮದ ಸಂಘದ ಆವರಣದಲ್ಲಿ ಅಧ್ಯಕ್ಷ ಕೆ.ಎಸ್.ಮಹದೇವಸ್ವಾಮಿ ಅಧ್ಯಕ್ಷತೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ವರದಿ ಮಂಡಿಸಿ ವಿವರಣೆ ನೀಡಿದರು.


ಇದೇ ವೇಳೆ ಸಂಘ ವ್ಯಾಪ್ತಿಗೆ ಒಳಪಟ್ಟಿರುವ ಕಂಚುಗಹಳ್ಳಿ, ನಾರಾಯಣಪುರ, ಮಲ್ಲಿಗಹಳ್ಳಿ, ತಿಗಡಹಳ್ಳಿ ಗ್ರಾಮಗಳ ಹಲವು ಷೇರುದಾರರು ಮಾತನಾಡಿ, ಬಿ.ಜಿ.ಪುರ ಸಹಕಾರ ಸಂಘದಿಂದ ನಮ್ಮನ್ನು ಬಿಡುಗಡೆ ಮಾಡಿ ಕುಂದೂರು ಸಹಕಾರ ಸಂಘಕ್ಕೆ ಸೇರಿಸುವುದರಿಂದ 5 ಕಿ.ಮೀ.ಗೂ ಹೆಚ್ಚು ದೂರ ನಾವು ಅಲೆಯಬೇಕಾಗುತ್ತದೆ. ಆದ್ದರಿಂದ ಇಲ್ಲಿನ ಸಂಘದಲ್ಲೇ ಉಳಿಸಿಕೊಳ್ಳುವಂತೆ ಒತ್ತಾಯಿಸಿ ಸಹಿ ಸಂಗ್ರಹದ ಪತ್ರವನ್ನು ಸಿಒಗೆ ನೀಡಿದರು.


ಅದೇ ರೀತಿ ವಕ್ಕರಹಳ್ಳಿ ಹಾಗೂ ವಾಸುವಳ್ಳಿ ಗ್ರಾಮಸ್ಥರು ಕಗ್ಗಲೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೊಸೈಟಿಗೆ ನಮ್ಮನ್ನು ಸೇರಿಸದಂತೆ ಮನವಿ ಮಾಡಿದರು.


ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾತನಾಡಿ, ಸಭೆಯಲ್ಲಿ ನಡೆದ ಚರ್ಚೆ ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಅವರ ಸಲಹೆಯಂತೆ ಕ್ರಮ ವಹಿಸಲಾಗುವುದು ಎಂದರು.


ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಗಳಿಸಿದ್ದ ಷೇರುದಾರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಂಘದ ಉಪಾಧ್ಯಕ್ಷ ಆನಂದ್, ನಿರ್ದೇಶಕರಾದ ಕೆ.ಸಿ.ಬಸವರಾಜು, ಎಂ.ನಂಜೇಗೌಡ, ಬಿ.ಪಿ.ಕರುಣಾಮೂರ್ತಿ, ವಕ್ಕರಹಳ್ಳಿ ಜಯರಾಜು, ಕೆ.ಎಂ.ದೇವಿಕಾ, ಭಾಗ್ಯಶ್ರೀ, ಎಚ್.ಎಂ.ಗುರುಸ್ವಾಮಿ ಕೆ.ಎಂ.ರೇವಣ್ಣ, ಕೆ.ಎಸ್. ಮಹದೇವಸ್ವಾಮಿ, ಸಿಬ್ಬಂದಿ ಹಾಗೂ ಷೇರುದಾರರು ಹಾಜರಿದ್ದರು.