ಜಿಲ್ಲೆ

ಹೂಡಿಕೆ ಹೆಸರಲ್ಲಿ 7.06 ಲಕ್ಷ ರೂ. ವಂಚನೆ

ಹುಬ್ಬಳ್ಳಿ: ಧಾರವಾಡ ಸತ್ತೂರ ಉದಯಗಿರಿಯ ಅಕೌಂಟೆಂಟ್ ಒಬ್ಬರಿಗೆ ಅಪರಿಚಿತರು ರತನ್ ಟಾಟಾ ಅವರ ಎಫ್‌ಎಕ್ಸ್‌ರೋಡ್ ಪ್ಲಾಟ್‌ಫಾರ್ಮ್‌ನಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚಿನ ಹಣ ಗಳಿಸಬಹುದೆಂದು ನಂಬಿಸಿ, ಯುಎಸ್‌ಡಿ ರೂಪದಲ್ಲಿ 7.06 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.

ದತ್ತಾತ್ರೇಯ ಮೋಸ ಹೋದವರು. ಫೇಸ್‌ಬುಕ್‌ನ ವಿಡಿಯೋದ ವೆಬ್‌ಸೈಟ್ ಕ್ಲಿಕ್ ಮಾಡಿದಾಗ ಅನಾಮಧೇಯನೊಬ್ಬ ಟೆಲಿಗ್ರಾಂ ಯೂಸರ್ ಐಡಿ ಮೂಲಕ ಸಂಪರ್ಕಿಸಿ, ಎಫ್‌ಎಕ್ಸ್‌ರೋಡ್ ಕಂಪನಿಯವರೆಂದು ನಂಬಿಸಿದ್ದಾನೆ. ಅದರ ಪ್ಲಾಟ್‌ಫಾರ್ಮ್‌ನಲ್ಲಿ ಯುಎಸ್‌ಡಿ ರೂಪದಲ್ಲಿ ಹಂತ ಹಂತವಾಗಿ 7,06,386 ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ದತ್ತಾತ್ರೇಯ ದೂರು ಕೊಟ್ಟಿದ್ದಾರೆ. ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.