ಜಿಲ್ಲೆ

69 ಲಕ್ಷ ರೂ. ವಂಚನೆ ಪ್ರಕರಣ ದಾಖಲು

ಬಳ್ಳಾರಿ : ಇಲ್ಲಿನ ಅಂದ್ರಾಳುವಿನ ಎಂ.ಆರ್‌ ಪೆಟ್ರೋಲ್‌ ಬಂಕ್‌ನಲ್ಲಿ ಕ್ಯಾಷಿಯರ್‌ ಆಗಿ ಕೆಲಸ ಮಾಡುತ್ತಿ ಹನುಮಂತ ಎಂಬಾತ 69 ಲಕ್ಷ ರೂ. ವಂಚನೆ ಮಾಡಿರುವುದಾಗಿ ಆರೋಪಿಸಿ ಎಪಿಎಂಸಿ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಆರೋಪಿ ಹನುಮಂತ, ಎಂ.ಆರ್‌ ಪೆಟ್ರೋಲ್‌ ಬಂಕ್‌ನಲ್ಲಿ ಕ್ಯಾಷಿಯರ್‌ ಆಗಿ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಟ್ರಾನ್ಸ್‌ಪೋರ್ಟ್‌ ಮಾಲೀಕರಿಂದ ಮತ್ತು ಇತರರಿಂದ ಒಂದು ವರ್ಷದ ಅವಧಿಯಲ್ಲಿ ಸಂಗ್ರಹವಾಗಿದ್ದ 69.98 ಲಕ್ಷ ರೂ. ಹಣವನ್ನು ಬ್ಯಾಂಕ್‌ಗೂ ಜಮೆ ಮಾಡದೆ, ಮಾಲೀಕರಿಗೂ ನೀಡದೇ ಹನುಮಂತ ವಂಚನೆ ಮಾಡಿರುವುದಾಗಿ ಪೆಟ್ರೋಲ್‌ ಬಂಕ್‌ನ ವ್ಯವಸ್ಥಾಪಕ ಲೋಕೇಶ್‌ ದೂರು‌ ನೀಡಿದ್ದಾರೆ.