ಹುಬ್ಬಳ್ಳಿ: ಷೇರ್ ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದೆಂದು ನಂಬಿದ ಬೆಂಗಳೂರಿನ ಕೆಂಚಪ್ಪ ಹೊಸಮನಿ ಎಂಬಾತ ಅಪರಿಚಿತರ ಖಾತೆಗೆ 68.94 ಲಕ್ಷ ರೂ. ಆನ್ಲೈನ್ ಮೂಲಕ ವರ್ಗಾಯಿಸಿ ವಂಚನೆಗೊಳಗಾಗಿದ್ದಾರೆ.
ಇಲ್ಲಿನ ಮಂಜುನಾಥನಗರ ಸಂಬಂಧಿಕರ ಮನೆಗೆ ಬಂದಿದ್ದ ಕೆಂಚಪ್ಪ, ಇನ್ಸ್ಟಾಗ್ರಾಂನಲ್ಲಿ ಹಾಕಿದ್ದ ಎಕ್ಸ್ಫ್ಲೋಮಾರ್ಕೆಟ್ಸ್.ಕಾಂ ಜಾಹೀರಾತು ನೋಡಿದ್ದಾರೆ. ಇದರಲ್ಲಿದ್ದ ಮೊಬೈಲ್ ಫೋನ್ ಸಂಖ್ಯೆಗೆ ಸಂರ್ಪಸಿದ್ದಾರೆ. ಆಕಡೆಯಿಂದ ಮಾತನಾಡಿದ ಅಪರಿಚಿತ ವ್ಯಕ್ತಿ, ನಮ್ಮ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಷೇರ್ ಮಾರುಕಟ್ಟೆಯಲ್ಲಿ ತೊಡಗಿಸಿ, ಹೆಚ್ಚಿನ ಲಾಭಾಂಶ ನಿಮಗೆ ಕೊಡಲಾಗುವುದು ಎಂದು ನಂಬಿಸಿದ್ದಾನೆ. ಆನ್ಲೈನ್ ಮೂಲಕ ವಿವಿಧ ಖಾತೆಗಳಿಂದ ಹಣ ವರ್ಗಾಯಿಸಿಕೊಂಡಿದ್ದಲ್ಲದೇ ಕೆಂಚಪ್ಪ ಅವರ ಆಪ್ತ ಸಹಾಯಕರಿಗೂ ಹಣ ಹೂಡಿಕೆ ಮಾಡುವಂತೆ ಸಂದೇಶ ಕಳುಹಿಸಿದ್ದಾನೆ. ಸಿಇಎನ್ ಕ್ರೖೆಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.