ಬೀದರ್: ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಒಕ್ಕೂಟ, ಡಿಸಿಸಿ ಬ್ಯಾಂಕ್, ಸಹಕಾರ ಇಲಾಖೆ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಹಯೋಗದಡಿ 20ರವರೆಗೆ ಜಿಲ್ಲಾದ್ಯಂತ 67ನೇ ಅಖಿಲ ಭಾರತ ಸಹಕಾರ ಸಪ್ತಾಹಕ್ಕೆ ಚಾಂಬೋಳದಲ್ಲಿ ಶನಿವಾರ ಚಾಲನೆ ನೀಡಲಾಗಿದೆ.
ಪ್ರಸಕ್ತ ಕರೊನಾ ಸೋಂಕು- ಆತ್ಮನಿರ್ಭರ್ ಭಾರತ- ಸಹಕಾರ ಸಂಘಗಳ ಧ್ಯೇಯ ಘೋಷವಾಕ್ಯದ ಕಾರ್ಯಕ್ರಮ ಉದ್ಘಾಟಿಸಿದ ಡಿಸಿಸಿ ಬ್ಯಾಂಕ್ ನಿರ್ದೇಶಕ ಮಹ್ಮದ್ ಸಲಿಮೊದ್ದೀನ್ ಮಾತನಾಡಿ, ಕರೊನಾ ಸಂಕಷ್ಟ ಇನ್ನು ಮುಗಿದಿಲ್ಲ. ಮಹಾಮಾರಿಯಿಂದ ಜಗತ್ತು ಸಂಕಷ್ಟದಲ್ಲಿದೆ. ಎರಡನೇ ಅಲೆ ಇನ್ನಷ್ಟು ಅಪಾಯ ತರಬಹುದಾಗಿದ್ದು, ಸಾರ್ವಜನಿಕರು ಕಟ್ಟೆಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪಿಕೆಪಿಎಸ್ ಅಧ್ಯಕ್ಷ ಮಾರುತೆಪ್ಪ ಸಿದ್ರಾಮಶೆಟ್ಟಿ ಮಾತನಾಡಿ, ಪ್ರತಿಯೊಂದು ಸಂಘ ಅಭಿವೃದ್ಧಿ ಆಗಬೇಕಾದರೆ ಸದಸ್ಯರ ಸಹಕಾರ ಮುಖ್ಯ. ಪ್ರತಿಯೊಬ್ಬರೂ ಜೀವನದಲ್ಲಿ ಸಹಕಾರ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಮುಖಂಡ ಕಾಶೀನಾಥ ಪಾಟೀಲ್, ಒಕ್ಕೂಟದ ನಿರ್ದೇಶಕ ವಿಜಯಕುಮಾರ ಸೋಲಪುರೆ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಸಂಗಮ ಭೀಮರಾವ ಹೈಬತ್ತಿ, ಡಿಸಿಸಿ ಬ್ಯಾಂಕ್ ಜನವಾಡ ಶಾಖೆ ವ್ಯವಸ್ಥಾಪಕ ಸಂಗಪ್ಪ ಗೋಡೆ, ಕ್ಷೇತ್ರ ಸಹಾಯಕ ವಿಷ್ಣುಕಾಂತ ಶಂಕರ ಇದ್ದರು. ರೇಖಾ ಗಾಯಕವಾಡ ನಿರೂಪಣೆ ಮಾಡಿ ವಂದಿಸಿದರು.
ಭಂಗೂರ: ಸಹಕಾರ ಸಪ್ತಾಹದ 2ನೇ ದಿನವಾದ ಭಾನುವಾರ ಭಂಗೂರದಲ್ಲಿ ಜಿಪಂ ಸದಸ್ಯ ಅಫ್ರೋಜ್ ಖಾನ್ ಕಾರ್ಯಕ್ರಮ ಉದ್ಘಾಟಿಸಿದರು. ಪಿಕೆಪಿಎಸ್ ಅಧ್ಯಕ್ಷ ಶಿವಶರಣಪ್ಪ ತಗಾರೆ ಅಧ್ಯಕ್ಷತೆ ವಹಿಸಿದ್ದರು. ಜಗನ್ನಾಥರೆಡ್ಡಿ, ಸಲೀಮ್ ಖಾನ್, ಶರಣಯ್ಯ ಸ್ವಾಮಿ, ಮಹಾದೇವಿ, ಶೇಷಮ್ಮ, ಪುಂಡಲೀಕರಾವ, ಮಲ್ಲಿಕಾರ್ಜುನ ಹಚ್ಚಿ, ಅನೀಲಕುಮಾರ ಇತರರಿದ್ದರು. ಎಚ್.ಆರ್. ಮಲ್ಲಮ್ಮ ನಿರೂಪಣೆ ಮಾಡಿದರು.