ಬೆಳಗಾವಿ: ತಾಲೂಕಿನ ಪೀರನವಾಡಿ ಗ್ರಾಮದಲ್ಲಿ ಅಕ್ರಮವಾಗಿ ಅನ್ನಭಾಗ್ಯ ಯೋಜನೆ ಅಕ್ಕಿ ಸಂಗ್ರಹಿಸಿ, ಮಾರಾಟ ಮಾಡುತ್ತಿದ್ದ ಪೀರನವಾಡಿಯ ಸಂಜಯ ಭೋಸಲೆ ಮನೆ ಮೇಲೆ ಆಹಾರ ನಿರೀಕ್ಷಕರು ದಾಳಿ ನಡೆಸಿ ಅಕ್ಕಿ ವಶಪಡಿಸಿಕೊಂಡು ದೂರು ದಾಖಲಿಸಿದ್ದಾರೆ.
ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಜನರಿಗೆ ಅಕ್ಕಿ ಕೊಡುತ್ತಿತ್ತು. ಹೀಗೆ ಕೊಟ್ಟಿದ್ದ 1.47 ಲಕ್ಷ ರೂ. ಮೊತ್ತದ 64 ಕ್ವಿಂಟಾಲ್ ಅಕ್ಕಿಯನ್ನು ಸಂಜಯ ಖರೀದಿ ಮಾಡಿ, ಹೆಚ್ಚಿನ ದರಕ್ಕೆ ಮಾರುವ ಉದ್ದೇಶ ಹೊಂದಿದ್ದರು.
ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಆಹಾರ ನಿರೀಕ್ಷಕ ಸುರೇಶ ಉಪ್ಪಾರ ಭಾನುವಾರ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.