ಕೊಳ್ಳೇಗಾಲ: ತಾಲೂಕಿನ ಚಿಕ್ಕಲ್ಲೂರು ಶ್ರೀ ಸಿದ್ದಪ್ಪಾಜಿ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ನಡೆದಿದ್ದು 6 ತಿಂಗಳ ಅವಧಿಗೆ 64.9 ಲಕ್ಷ ರೂ. ಹಣ ಸಂಗ್ರಹವಾಗಿದೆ.
ತಹಸೀಲ್ದಾರ್ ಬಸವರಾಜು ಹಾಗೂ ರಾಜುಬೊಪ್ಪೇಗೌಡನ ಪುರದ ಶ್ರೀ ಜ್ಞಾನಾನಂದ ಚೆನ್ನರಾಜೇ ಅರಸ್ ನೇತೃತ್ವದಲ್ಲಿ ಶನಿವಾರ ಹಳೇ ಮಠದ 2 ಹುಂಡಿಗಳು ಹಾಗೂ ಸಿದ್ದಪ್ಪಾಜಿ ದೇವಸ್ಥಾನದ 6 ಹುಂಡಿಗಳ ಎಣಿಕೆ ಕಾರ್ಯ ನಡೆದಿದೆ. ಗ್ರಾಮಾಂತರ ಠಾಣೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು. ಹುಡಿ ಎಣಿಕೆ ಕಾರ್ಯದಲ್ಲಿ ಉಪ ತಹಸೀಲ್ದಾರ್ ವಿಜಯಕುಮಾರ್, ರೆವಿನ್ಯೂ ಇನ್‌ಸ್ಪೆಕ್ಟರ್ ರಂಗಸ್ವಾಮಿ, ಕಂದಾಯ ಇಲಾಖೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಿಬ್ಬಂದಿ ಹಾಜರಿದ್ದರು.