ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಶುಕ್ರವಾರ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳದಲ್ಲಿ ಸುಮಾರು 6200 ಯುವಕರಿಗೆ ನೌಕರಿ ಭಾಗ್ಯ ದೊರಕಿದೆ.
ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ(ಅಪ್ಪುಗೌಡ) ಅವರ 37ನೇ ಜನ್ಮದಿನ ನಿಮಿತ್ತ ಆದರ್ಶ ಆಸ್ಪತ್ರೆ ಮತ್ತು ದಿ.ಚಂದ್ರಶೇಖರ ಪಾಟೀಲ್ ರೇವೂರ ಅಭಿಮಾನಿಗಳ ಬಳಗವು ನೂತನ ವಿದ್ಯಾಲಯ ಮೈದಾನದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಿತ್ತು. ವಿವಿಧೆಡೆಯಿಂದ ಪ್ರತಿಷ್ಠಿತ 151 ಕಂಪನಿಗಳು ಆಗಮಿಸಿದ್ದವು. ನಾನಾ ಪ್ರಕ್ರಿಯೆ ನಂತರ ಸುಮಾರು 6200 ನಿರುದ್ಯೋಗಿಗಳಿಗೆ ನೌಕರಿ ಸಿಕ್ಕಿದೆ.
ನಾನಾ ಜಿಲ್ಲೆಗಳ 17000 ಯುವಕರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದು, 12000 ಅಭ್ಯರ್ಥಿಗಳ ಸಂದರ್ಶನ ನಡೆದಿದೆ. ಇದರಲ್ಲಿ 6200 ಆಕಾಂಕ್ಷಿಗಳಿಗೆ ಉದ್ಯೋಗ ಲಭಿಸಿದೆ. ಎಲ್ಲ ಕಂಪನಿಗಳಿಗೆ ಪ್ರತ್ಯೇಕ ಮಳಿಗೆ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗಿತ್ತು. ಮೈದಾನ ಪ್ರವೇಶದ ಗೇಟ್ ಬಳಿ ಮಾಹಿತಿ ಕೇಂದ್ರ ಸ್ಥಾಪಿಸಲಾಗಿತ್ತು. ಎಲ್ಲಿ ಯಾವ ಕಂಪನಿ ಅಧಿಕಾರಿಗಳು ಸಂದರ್ಶನ ನಡೆಸುವರು ಎಂಬ ವಿವರ ನೀಡಲಾಯಿತು. ಹೀಗಾಗಿ ವಿವಿಧೆಡೆಯಿಂದ ಆಗಮಿಸಿದ್ದ ಸಹಸ್ರಾರು ಯುವಕ-ಯುವತಿಯರು ತಮ್ಮ ವಿದ್ಯಾರ್ಹತೆ, ಆಸಕ್ತಿಗೆ ಅನುಗುಣ ಆಯಾ ಕಂಪನಿಯವರ ಬಳಿ ತೆರಳಿ ಸಂದರ್ಶನದಲ್ಲಿ ಭಾಗಿಯಾದರು.
ಸಂದರ್ಶನಕ್ಕೆ ಆಗಮಿಸಿದ ಎಲ್ಲರಿಗೂ ಅಲ್ಲಲ್ಲಿ ತಂಪು , ಶುದ್ಧ ಕುಡಿಯುವ ನೀರು ಮತ್ತು ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಜಿಲ್ಲೆ ಮಾತ್ರವಲ್ಲದೆ ಯಾದಗಿರಿ, ಬೀದರ್, ರಾಯಚೂರು ಮತ್ತು ವಿಜಯಪುರ ಜಿಲ್ಲೆಗಳಿಂದಲೂ ಯುವಕರು ಉದ್ಯೋಗ ಬಯಸಿ ಮೇಳದಲ್ಲಿ ಪಾಲ್ಗೊಂಡರು. ಅಂಗವಿಕಲರಿಗೆ ಸ್ಥಳದಲ್ಲೇ ನೇಮಕ ಪತ್ರ ನೀಡಲಾಯಿತು. ಮೇಳದಲ್ಲಿ ನೌಕರಿ ಖಾತ್ರಿಯಾದ ಅನೇಕ ಯುವಕರು ಶಾಸಕ ಅಪ್ಪುಗೌಡರಿಗೆ ಕೃತಜ್ಞತೆ ಅಪರ್ಿಸಿದರು.
ಸಂದರ್ಶನ ಮಳಿಗೆಗಳಿಗೆ ಚಾಲನೆ ನೀಡಿದ ಉಪ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಶಾಸಕ ದತ್ತಾತ್ರೇಯ ಪಾಟೀಲ್ ಅವರು ರಾಜಕೀಯ ಕ್ಷೇತ್ರದಲ್ಲಿ ಉನ್ನತ ಸ್ಥಾನ ಪಡೆಯಲಿ ಎಂದು ಶುಭ ಕೋರಿದರು.
ವೃದ್ಧಾಪ್ಯ ವೇತನಕ್ಕೆ ಇನ್ಮುಂದೆ
ಅರ್ಜಿ ಹಾಕುವ ಅಗತ್ಯವಿಲ್ಲ
ಇನ್ಮುಂದೆ ವೃದ್ಧಾಪ್ಯ ವೇತನಕ್ಕೆ ಅಜರ್ಿ ಸಲ್ಲಿಸುವ ಅಗತ್ಯವಿಲ್ಲ. ಆಧಾರ್ ಕಾಡರ್್ ಆಧರಿಸಿ 60 ವರ್ಷ ಪೂರೈಸಿರುವ ವೃದ್ಧರಿಗೆ ಮನೆ ಬಾಗಿಲಿಗೆ ಈ ವೇತನ ಬರಲಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು. ಉದ್ಯೋಗ ಮೇಳದಲ್ಲಿ ಮಾತನಾಡಿದ ಅವರು, ವೃದ್ಧರು ವೇತನಕ್ಕಾಗಿ ಕಚೇರಿಗಳಿಗೆ ಅಲೆದಾಡುವ ಅಗತ್ಯವಿಲ್ಲ. ಇದಕ್ಕಾಗಿ ದುಡ್ಡು ಖಚರ್ು ಮಾಡುವುದೂ ಬೇಕಿಲ್ಲ. ಅಜರ್ಿ ಸಲ್ಲಿಸದೆ ವೃದ್ಧಾಪ್ಯ ವೇತನ ಪಡೆಯುವಂಥ ನಿಯಮ ಜಾರಿಗೆ ತರಲಾಗುತ್ತಿದೆ ಎಂದರು.
ಸಾಕ್ಷಿಯಾದ ಮಠಾಧೀಶರು, ಗಣ್ಯರು
ಶ್ರೀಶೈಲ ಸಾರಂಗ ಮಠದ ಜಗದ್ಗುರು ಶ್ರೀ ಡಾ.ಸಾರಾಂಗಧರ ದೇಶಿಕೇಂದ್ರ ಸ್ವಾಮೀಜಿ, ಬಡದಾಳದ ಶ್ರೀ ಡಾ.ಚನ್ನಮಲ್ಲ ಶಿವಾಚಾರ್ಯ, ಚಿಣಮಗೇರಿಯ ಸಿದ್ಧರಾಮ ಶ್ರೀ, ಶ್ರೀನಿವಾಸ ಸರಡಗಿಯ ಡಾ.ರೇವಣಸಿದ್ದ ಶ್ರೀ, ಡಾ.ಅಪ್ಪಾರಾವ ದೇವಿ ಮುತ್ಯಾ, ಶ್ರೀ ಪರ್ವತಲಿಂಗ ಪರಮೇಶ್ವರ ಮಹಾರಾಜ, ಆಟರ್್ ಆಫ್ ಲಿವಿಂಗ್ನ ಶರಣು ಸ್ವಾಮಿ, ಸ್ಟೇಷನ್ ಬಬಲಾದನ ರೇವಣಸಿದ್ದ ಶ್ರೀ, ಹಿಪ್ಪರಗಾದ ಅಭಿನವ ಶಿವಲಿಂಗ ಶ್ರೀ, ಮುಗಳಗಾವಿಯ ಅಭಿನವ ಸಿದ್ದಲಿಂಗ ಶ್ರೀ, ಸಂಘಾನಂದ ಭಂತೇಜಿ, ರಾಜಯೋಗಿನಿ ಬಿಕೆ ರತ್ನಾ, ರಾಜಯೋಗಿನಿ ಬಿಕೆ ವಿಜಯಾ, ಡಿಸಿಎಂ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್. ಅಶೋಕ್, ಸಂಸದ ಡಾ.ಉಮೇಶ ಜಾಧವ್, ಆದರ್ಶ ಆಸ್ಪತ್ರೆ ಮುಖ್ಯಸ್ಥ ಡಾ.ಅಲೋಕ ಪಾಟೀಲ್ ರೇವೂರ, ಜಿಪಂ ಅಧ್ಯಕ್ಷೆ ಸುವರ್ಣ ಮಲಾಜಿ, ಶಾಸಕರಾದ ಬಿ.ಜಿ. ಪಾಟೀಲ್, ಸುಭಾಷ ಗುತ್ತೇದಾರ್, ಡಾ.ಅವಿನಾಶ ಜಾಧವ್, ನರಸಿಂಹ ನಾಯಕ, ಬಸವರಾಜ ಮತ್ತಿಮೂಡ, ರಾಜಕುಮಾರ ಪಾಟೀಲ್ ತೆಲ್ಕೂರ, ಮಾಜಿ ಸಚಿವರಾದ ರೇವೂನಾಯಕ ಬೆಳಮಗಿ, ಮಾಜಿ ಶಾಸಕರಾದ ಅಮರನಾಥ ಪಾಟೀಲ್, ಶಶೀಲ್ ನಮೋಶಿ, ಬಿಜೆಪಿ ಜಿಲ್ಲಾಧ್ಯಕ್ಷರಾದ ಶಿವರಾಜ ಪಾಟೀಲ್ ರದ್ದೇವಾಡಗಿ, ಸಿದ್ದಾಜಿ ಪಾಟೀಲ್, ಎಪಿಎಂಸಿ ಅಧ್ಯಕ್ಷ ಗುರುಬಸಪ್ಪ ಕಣಕಿ, ಎಪಿಎಂಸಿ ಕಾರ್ಯದಶರ್ಿ ಎಂ.ವಿ. ಶೈಲಜಾ, ಮುಖಂಡರಾದ ಚಂದು ಪಾಟೀಲ್, ಪ್ರಹ್ಲಾದ ಪೂಜಾರಿ, ಅರುಣ ಕುಲಕಣರ್ಿ ಮೊದಲಾದವರು ಪಾಲ್ಗೊಂಡಿದ್ದರು.