ಕೊಳ್ಳೇಗಾಲ: ತಾಲೂಕಿನ ಸಿದ್ದಯ್ಯನಪುರ ಗ್ರಾಮದಲ್ಲಿರುವ ಅರುಣೋದಯ ಯೇಸು ಚರ್ಚ್‌ನಲ್ಲಿ ಭಾನುವಾರ ಭಾರತೀಯ ಕ್ರೈಸ್ತ ದಿನದ ಅಂಗವಾಗಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 60ಕ್ಕೂ ಹೆಚ್ಚು ದಾನಿಗಳು ರಕ್ತದಾನ ಮಾಡಿದರು.
ಚರ್ಚ್ ಪಾಸ್ಟರ್ ವಿನ್ಸೆಂಟ್ ಅಮಲ್ ದಾಸ್ ಮಾತನಾಡಿ, ಚರ್ಚ್‌ನಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರ ಯಶಸ್ವಿಯಾಗಿದೆ. ಸ್ವಯಂ ಪ್ರೇರಿತವಾಗಿ ಅನೇಕ ಯುವಕರು ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಜೀವ ಉಳಿವಿಗೆ ಸಹಕರಿಸಿದ್ದಾರೆ. ರಕ್ತದಾನ ಮಾಡುವುದು ಪುಣ್ಯದ ಕೆಲಸವಾಗಿದೆ. ಇದರಿಂದ ಒಬ್ಬರ ಜೀವ ಉಳಿಸಿದ ಪುಣ್ಯ ಸಿಗುತ್ತದೆ. ಯುವಕರು ತಮ್ಮ ಆರೋಗ್ಯ ಕಡೆ ಹೆಚ್ಚು ಗಮನಹರಿಸಬೇಕು. ರಕ್ತದಾನ ಮಾಡಲು ಮುಂದಾಗಬೇಕು ಎಂದು ಕರೆನೀಡಿದರು.
67 ಮದಿಯಿಂದ ರಕ್ತದಾನ: ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ನಡೆದ ರಕ್ತದಾನ ಶಿಬಿರದಲ್ಲಿ 67 ಜನರು ರಕ್ತದಾನ ಮಾಡಿದರು. ಚರ್ಚ್‌ನ ಸಭಾಪಾಲಕಿ ಪುಣ್ಯಶ್ರೀ, ಶ್ರೀಕಾಂತ್, ಲಿಂಗರಾಜು, ಮೋಹನ್, ರೋನಿತ್, ಶಿವಶಂಕರ್, ಪ್ರತಾಪ್, ಸಿದ್ದರಾಜು, ಸಿದ್ದಲಿಂಗ, ರೋಷನ್, ರಮೇಶ್ ಇತರರು ಇದ್ದರು.