ಜಿಲ್ಲೆ

600ಕ್ಕೂ ಅಧಿಕ ಮಕ್ಕಳಿಗೆ ನೋಟ್​ಬುಕ್​ ವಿತರಣೆ

ಬೋರಗಾಂವ: ಕೆಎಲ್​ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರ ಸಾಮಾಜಿಕ ಕಾರ್ಯ ಎಲ್ಲರಿಗೂ ಮಾದರಿ ಎಂದು ಬಿಜೆಪಿ ಮುಖಂಡ ಪ್ರಕಾಶ ಪಾಟೀಲ ಹೇಳಿದರು. ಸೋಮವಾರ ಸಮೀಪದ ಸದಲಗಾ ಪಟ್ಟಣದಲ್ಲಿ ಡಾ.ಪ್ರಭಾಕರ ಕೋರೆ ಜನ್ಮದಿನವನ್ನು ವಿವಿಧ ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಆಚರಿಸಲಾಯಿತು.

ಪಟ್ಟಣದ ಸದಲಗಾ ಶಿಕ್ಷಣ ಸಂಸ್ಥೆಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ 600ಕ್ಕೂ ಹೆಚ್ಚು ಮಕ್ಕಳಿಗೆ ಉಚಿತವಾಗಿ ನೋಟ್​ಬುಕ್​ ವಿತರಿಸಲಾಯಿತು. ವಿವಿಧ ವಾರ್ಡ್​ಗಳಲ್ಲಿ ಸಸಿ ನೆಡಲಾಯಿತು. ಮಕ್ಕಳಿಗೆ ಆರೋಗ್ಯ ತಪಾಸಣೆ, ಗೋಶಾಲೆಯಲ್ಲಿ ಮೇವು ವಿತರಿಸಲಾಯಿತು. ಪುರಸಭೆ ಅಧ್ಯಕ್ಷ ಅಭಿಜಿತ ಪಾಟೀಲ ಮಾತನಾಡಿದರು.

ಯುವ ಮುಖಂಡ ಚೇತನ ಪಾಟೀಲ, ಪಿಕೆಪಿಎಸ್​ ಅಧ್ಯಕ್ಷ ಕೇತನ ಪಾಟೀಲ, ಪುರಸಭೆ ಸದಸ್ಯ ಬಸವರಾಜ ಹಣಬರ, ಧರೆಪ್ಪ ಹವಾಲ್ದಾರ, ಆನಂದ ಪಾಟೀಲ, ಅಭಿಜಿತ ಪಾಟೀಲ, ಹೇಮಂತ ಶಿಂಗೆ, ಸುನೀಲ ನಂದೆ, ಪ್ರಶಾಂತ ಕರಂಗಳೆ, ಜೀತ ಹುದ್ದಾರ, ಭರತ ಪಾಟೀಲ, ಅತಿಕ್ರಾಂತ ಪಾಟೀಲ, ಸುನೀಲ ಕಲಾಜೆ, ಡಾ.ಕೋರೆ ಅಭಿಮಾನಿ ಬಳಗದವರು ಇದ್ದರು.