ಜಿಲ್ಲೆ

600 ಬಾಣಸಿಗರಿಂದ ಊಟದ ಸಿದ್ಧತೆ

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದಲ್ಲಿ ಜ. 12ರಿಂದ ನಡೆಯುವ 26ನೇ ರಾಷ್ಟ್ರೀಯ ಯುವ ಜನೋತ್ಸವಕ್ಕೆ ದೇಶದ ವಿವಿಧ ಭಾಗಗಳ ಸ್ವಾದಿಷ್ಟ ಭಕ್ಷೃಗಳನ್ನು ತಯಾರಿಸಲಾಗುತ್ತಿದೆ. ಸುಮಾರು 600 ಬಾಣಸಿಗರು ಸುಮಾರು ಲಕ್ಷ ಜನರಿಗೆ ಗುಣಮಟ್ಟದ ವೈವಿಧ್ಯಮಯ ತಿಂಡಿ, ತಿನಿಸುಗಳ ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಇಲ್ಲಿನ ಕೃಷಿ ವಿವಿ ಆವರಣದ 5 ಎಕರೆ ಜಾಗದಲ್ಲಿ ಆಹಾರ ಸಿದ್ಧತೆ ಹಾಗೂ ಕೃವಿವಿ ಸಭಾಂಗಣದಲ್ಲಿ ಊಟಕ್ಕೆ ವ್ಯವಸ್ಥೆ ಮಾಡಲಾಗಿದೆ. ದೇಶದ ವೈವಿಧ್ಯತೆ ಮತ್ತು ಏಕತೆ ಪ್ರತಿಬಿಂಬಿಸುವ ಯುವ ಜನೋತ್ಸವದಲ್ಲಿ ಆಹಾರ ವೈವಿಧ್ಯೆದ್ಯತೆಗೂ ಒತ್ತು ನೀಡಲಾಗಿದೆ. ಐದು ದಿನಗಳಲ್ಲಿ ಒಂದು ದಿನ ಉತ್ತರ ಕರ್ನಾಟಕ ಶೈಲಿಯ ಊಟ ಇರಲಿದೆ. ಉತ್ತರ ಭಾರತ, ದಕ್ಷಿಣ ಭಾರತ ಶೈಲಿಯ ಖಾದ್ಯಗಳು ವಿಶೇಷವಾಗಿರಲಿವೆ. ಪ್ರತಿದಿನ ಒಂದೊಂದು ರೀತಿ ಪಾಯಸ ಇರಲಿದೆ.
ಮೊದಲ ದಿನ ಉಪಾಹಾರಕ್ಕೆ ಬಾಳೆ ಹಣ್ಣು, ಕಲ್ಲಂಗಡಿ, ಬ್ರೆಡ್, ಬಟರ್, ಜಾಮ್, ಕಾರ್ನ್‌ಫ್ಲೇಕ್ಸ್, ಬೇಯಿಸಿದ ಮೊಟ್ಟೆ ಅಥವಾ ಮೊಟ್ಟೆ ಪಲ್ಯ, ಆಮ್ಲೆಟ್, ಇಡ್ಲಿ, ವಡೆ, ಆಲೂ ಪರೋಟ, ಶಾವಿಗೆ ಉಪ್ಪಿಟ್ಟು, ಕಾಫಿ, ಟೀ, ಮಿನಿ ರಸ್ಕ್ ಮತ್ತು ಖಾರಿ, ಬಿಸಿ ಮತ್ತು ತಂಪಾದ ಬಾದಾಮಿ ಹಾಲು. ಮಧ್ಯಾಹ್ನ ಬಿಂದಿ ಮಸಾಲ, ಪನ್ನೀರ್ ಮಟರ್, ದಾಲ್ ಮಖನ್, ಗೋಧಿ ರೋಟಿ/ತವಾ ರೋಟಿ, ಕುಲ್ಚಾ, ತಂದೂರಿ ರೋಟಿ, ಪಲಾವ್, ಅನ್ನ, ಕ್ಯಾರೇಟ್ ಹಲ್ವಾ. ಸಂಜೆ ಹೈ ಟೀಗೆ ತರಕಾರಿ ಮಿಶ್ರಣದ ಪಕೋಡ, ಕುಕೀಸ್, ಕಾಫಿ ಟೀ. ರಾತ್ರಿ ಊಟಕ್ಕೆ ಮಟನ್, ಪನ್ನೀರ್ ಹರಿಯಾಲಿ, ಚಪಾತಿ, ಬೇಬಿ ನಾನ್, ತಂದೂರಿ ರೋಟಿ, ದೋಸೆ, ಸಾಲಡ್, ಪಾಸ್ತಾ, ಟೊಮೊಟೋ ರೈಸ್, ಜಿಲೇಬಿ ರಬ್ಡಿ.
2ನೇ ದಿನ ಬೆಳಗ್ಗೆ ಉಪಾಹಾರಕ್ಕೆ ಪರಂಗಿ/ಸೇಬು ಹಣ್ಣು, ಇಡ್ಲಿ, ವಡೆ, ಚೋಲೆ ಬಟೂರಾ ಪೊಹ ಮತ್ತು ಡೋಕ್ಲಾ. ಮಧ್ಯಾಹ್ನದ ಊಟಕ್ಕೆ ಪನೀರ್ ಬಟರ್ ಮಸಾಲ, ಆಲೂ ಗೋಬಿ, ದಾಲ್ ತಡ್ಕ, ಗೋಧಿ ರೋಟಿ, ಕುಲ್ಚಾ, ತಂದೂರಿ ರೋಟಿ, ಫ್ರೈಡ್ ರೈಸ್, ಶೇಜ್ವಾನ್ ಫ್ರೈಡ್ ರೈಸ್, ಮೂಂಗ್ ದಾಲ್ ಹಲ್ವಾ. ಸಂಜೆ ವಡಾಪಾವ್, ಕುಕೀಸ್. ರಾತ್ರಿ ಊಟಕ್ಕೆ ಮೀನು, ಮಲಾಯ್ ಕೋಫ್ತಾ, ಬೇಂಡಿ ದಾಲ್ ಪಾಲಕ್, ರೋಟಿ, ನೂಡಲ್ಸ್, ಘೀ ರೈಸ್ ಇರಲಿದೆ.
3ನೇ ದಿನಕ್ಕೆ ಕಿತ್ತಲೆ/ಬಾಳೆ ಹಣ್ಣು, ಬ್ರೆಡ್, ಬಟರ್, ಜಾಮ್, ಬೇಯಿಸಿದ ಮೊಟ್ಟೆ, ಪಲ್ಯ, ಆಮ್ಲೆಟ್, ಇಡ್ಲಿ, ವಡೆ, ದೋಸೆ, ಉಪ್ಪಿಟ್ಟು, ಕೇಸರಿಬಾತ್. ಮಧ್ಯಾಹ್ನದ ಊಟಕ್ಕೆ ರಾಜ್ಮಾ ಮಸಾಲ, ಶಿಮ್ಲಾ ಮಿರ್ಚಿ, ಆಲೂ ಕಿ ಸಬ್ಜಿ, ಪಾಲಕ್ ಪನ್ನೀರ್, ತವಾ ರೋಟಿ, ಕುಲ್ಚಾ, ತಂದೂರಿ ರೋಟಿ, ವೆಜ್ ಬಿರಿಯಾನಿ, ಗುಲಾಬ್ ಜಾಮೂನ್. ಸಂಜೆ ಮೈಸೂರು ಬಜಿ, ಕುಕೀಸ್. ರಾತ್ರಿ ಊಟಕ್ಕೆ ಮೊಟ್ಟೆ ಸಾರು, ಪನ್ನೀರ್ ಬುರ್ಜಿ, ದಾಲ್ ಕೊಲ್ಹಾಪುರಿ, ಗೋಧಿ ಚಪಾತಿ, ಬೇಬಿ ನಾನ್, ತಂದೂರಿ ರೋಟಿ, ದೋಸೆ, ಸಾಲಡ್, ಜೀರಾ ರೈಸ್. 4ನೇ ದಿನದ ಉಪಾಹಾರಕ್ಕೆ ಪರಂಗಿ/ಸೀಬೆ ಹಣ್ಣು, ಬ್ರೆಡ್ ಬಟರ್ ಜಾಮ್, ಕಾರ್ನ್ ಫ್ಲೇಕ್ಸ್, ಬೇಯಿಸಿದ ಮೊಟ್ಟೆ, ಪಲ್ಯ, ಆಮ್ಲೆಟ್, ಇಡ್ಲಿ, ವಡೆ, ಸಬೂದಾನಿ ಕಚಡಿ. ಮಧ್ಯಾಹ್ನ ಶಾಹಿ ಪನ್ನೀರ್, ಮಶ್ರೂಮ್ ಮಸಾಲ, ರೋಟಿಗಳು, ಜೀರಾ ರೈಸ್, ಶಾವಿಗೆ ಪಾಯಿಸ. ಸಂಜೆ ಸಬೂದನ ವಡೆ, ಕುಕೀಸ್. ರಾತ್ರಿ ಮೀನು, ಪನ್ನೀರ್ ಬುರ್ಜಿ, ಬೀಟ್‌ರೂಟ್ ಮಸಾಲ, ಗೋಧಿ ಚಪಾತಿ, ಬೇಬಿ ನಾನ್, ತಂದೂರಿ ರೋಟಿ, ದೋಸೆ, ಸಾಲಡ್, ರಸಮಲೈ ಇರಲಿದೆ.
5ನೇ ದಿನ ಕಲ್ಲಂಗಡಿ/ಕಿತ್ತಲೆ, ಬ್ರೆಡ್ ಬಟರ್ ಜಾಮ್, ಕಾರ್ನಫ್ಲೇಕ್ಸ್, ಬೇಯಿಸಿದ ಮೊಟ್ಟೆ, ಪಲ್ಯ, ಆಮ್ಲೆಟ್, ಇಡ್ಲಿ, ವಡೆ, ಟೊಮೊಟೋ ರೈಸ್. ಮಧ್ಯಾಹ್ನದ ಊಟಕ್ಕೆ ಉತ್ತರ ಕರ್ನಾಟಕದ ವಿಶೇಷವಾದ ಎಣ್ಣೆಗಾಯಿ ಬದನೆಕಾಯಿ, ಜುಂಕಾ, ಸಂಜ್ಕಾ, ಹೆಸರು ಕಾಳು ಪಲ್ಯ, ಸಜ್ಜಿ/ಖಡಕ್ ರೊಟ್ಟಿ, ಚಪಾತಿ, ಮೂರು ರೀತಿಯ ಚಟ್ನಿ ಪೌಡರ್, ನಿಂಬೆ ಹಣ್ಣಿನ ಚಿತ್ರಾನ್ನ, ಅನ್ನ, ಕಟ್ಟು ಸಾರು, ರಸಂ, ಸಾಂಬಾರ್, ಗೋದಿ ಹುಗ್ಗಿ. ಸಂಜೆ ಗಿರ್ಮಿಟ್, ಮಿರ್ಚಿ. ರಾತ್ರಿ ಕೋಳಿ ಖಾದ್ಯ, ಅಲಸಂದೆ ಕಾಳು ಪಲ್ಯ, ಪನ್ನೀರ್, ಮಿಕ್ಸ್ ವೆಜ್, ರೋಟಿಗಳು, ರೆಡ್ ಸಾಸ್/ವೈಟ್ ಸಾಸ್ ಪಾಸ್ತಾ, ಪಾಲಕ್ ರೈಸ್, ಹೆಸರುಬೇಳೆ ಪಾಯಸ ಇರಲಿದೆ.
6ನೇ ದಿನ ಉಪಾಹಾರಕ್ಕೆ ಬಾಳೆ ಹಣ್ಣು/ಸೇಬು, ಬ್ರೆಡ್ ಬಟರ್, ಜಾಮ್, ಕಾರ್ನ್ ಫ್ಲೇಕ್ಸ್, ಬೇಯಿಸಿದ ಮೊಟ್ಟೆ, ಪಲ್ಯ, ಆಮ್ಲೆಟ್, ಇಡ್ಲಿ, ವಡೆ, ಗೋಬಿ, ಆಲೂ ಪರೋಟ, ಪುಳಿಯೋಗರೆ ಅಥವಾ ಪೊಂಗಲ್. ಮಧ್ಯಾಹ್ನ ಊಟಕ್ಕೆ ವೆಜ್ ಹಂಡಿ, ದಾಲ್‌ಮೇಥಿ, ಪನ್ನೀರ್, ರೋಟಿ, ಮಹಾರಾಷ್ಟ್ರ ಮಸಾಲ ಬಾತ್ ಅಥವಾ ಗ್ರೀನ್ ಪಲಾವ್. ಸಂಜೆ ದಾಲ್ ವಡಾ, ಕುಕೀಸ್. ರಾತ್ರಿ ಊಟಕ್ಕೆ ಮಟನ್ ಖೀಮಾ, ಪನ್ನೀರ್ ಧಮ್ ಆಲೂ, ಗೋಬಿ ಬಜಾರ್, ಮಟರ್, ರೋಟಿ, ದೋಸೆ, ಸಾಲಡ್, ದಾಲ್ ಕಿಚಡಿ ಮತ್ತು ಗುಜರಾತಿ ಖಾದ್ಯ, ಫ್ರೈಡ್ ರೈಸ್, ಕರದಂಟು ಹಾಗೂ ಕುಂದಾ ಇರಲಿದೆ ಎಂದು ಪ್ರಕಟಣೆ ತಿಳಿಸಿದೆ.