ಜಿಲ್ಲೆ

ಅಂದಾಜು 60 ಲ ರೂ. ವೆಚ್ಚದಲ್ಲಿ ಚನ್ನಮ್ಮ ಮೂರ್ತಿ ನಿರ್ಮಾಣ

ಬಸವನಬಾಗೇವಾಡಿ: ಪಂಚಲೋಹದ ವೀರರಾಣಿ ಕಿತ್ತೂರು ಚನ್ನಮ್ಮ ಮೂರ್ತಿಯನ್ನು ಅಂದಾಜು 60 ಲ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಬರುವ 2025ರ ಅಕ್ಟೋಬರ್​ 23 ರಂದು ಪಟ್ಟಣದಲ್ಲಿ ಸ್ಥಾಪಿಸಲಾಗುವುದು ಎಂದು ಸಹಕಾರಿ ಮಹಾಮಂಡಳಿ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಹೇಳಿದರು.

ಪಟ್ಟಣದ ಬಸವೇಶ್ವರ ದೇವಸ್ಥಾನದ ಒಳ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಸಭೆಯ ಅಧ್ಯತೆ ವಹಿಸಿ ಅವರು ಮಾತನಾಡಿದರು.

ಮಹಾರಾಷ್ಟ್ರದಲ್ಲಿ ಈಗಾಗಲೇ ಚನ್ನಮ್ಮ ಮೂರ್ತಿ ನಿರ್ಮಾಣ ಶೇ.80 ರಷ್ಟು ಪೂರ್ಣಗೊಂಡಿದೆ. ಪಟ್ಟಣದ ವಿಜಯಪುರ ರಸ್ತೆಯ ಬಳಿ ವೃತ್ತದ ಕಾಮಗಾರಿ ಕಾರ್ಯ ಕೂಡ ನಡೆದಿದೆ. ಮೂರ್ತಿ ತಯಾರಿಕೆಗೆ ಸಮಾಜದ ಪ್ರಮುಖರಿಂದ ಹಣ ಸಂಗ್ರಹಿಸಲಾಗಿದೆ. ಆದರೆ ಯಾವುದೇ ಶಾಸಕರು, ಸಂಸದರು ಅಥವಾ ವಿಧಾನಪರಿಷತ್​ ಸದಸ್ಯರಿಂದಾಗಲಿ ಹಣದ ಸಹಾಯ ಪಡೆದಿಲ್ಲ ಎಂದು ಹೇಳಿದರು.

ತಾಲೂಕು ಆಡಳಿತದಿಂದ ಅ.23 ರಂದು ಬೆಳಗ್ಗೆ 8ಕ್ಕೆ ತಹಸೀಲ್ದಾರ್​ ಕಚೇರಿಯಲ್ಲಿ ಚನ್ನಮ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಜಯಂತಿ ಆಚರಿಸಲಾಗುವುದು. ಬೆಳಗ್ಗೆ 9ಕ್ಕೆ ತಾಲೂಕು ಆಡಳಿತದಿಂದ ತಾಲೂಕು ಪಂಚಮಸಾಲಿ ಸಮಾಜದವರೊಂದಿಗೆ ಪಟ್ಟಣದ ವಿಜಯಪುರ ರಸ್ತೆಯ ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಗುವುದು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ವಾದ್ಯಗಳೊಂದಿಗೆ ರಾಣಿ ಚನ್ನಮ್ಮನ ಭಾವಚಿತ್ರ ಮೆರವಣಿಗೆ ನಡೆಸಲಾಗುವುದು ಎಂದು ಹೇಳಿದರು.

ಪಂಚಮಸಾಲಿ ಸಮಾಜದ ತಾಲೂಕ ಅಧ್ಯ ಬಸವರಾಜ ಗೊಳಸಂಗಿ, ಸಂಗನಗೌಡ ಚಿಕ್ಕೊಂಡ, ನಿವೃತ್ತ ಶಿಕ ಎಂ.ಜಿ.ಆದಿಗೊಂಡ ಮಾತನಾಡಿ, ಬಸವೇಶ್ವರ ದೇವಸ್ಥಾನದ ಹೊರ ಆವರಣದಲ್ಲಿರುವ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮ ಜಯಂತ್ಯುತ್ಸವ ನಡೆಯಲಿದೆ. ಉಪನ್ಯಾಸ ಸೇರಿ ಅನೇಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು.

ಪುರಸಭೆ ಮಾಜಿ ಅಧ್ಯರಾದ ಬಸಣ್ಣ ದೇಸಾಯಿ, ಶಿವನಗೌಡ ಬಿರಾದಾರ, ಲ.ರು.ಗೊಳಸಂಗಿ, ಎ.ಪಿ.ಎಂ.ಸಿ ಅಧ್ಯ ಚಂದ್ರಶೇಖರಗೌಡ ಪಾಟೀಲ, ಎಪಿಎಂಸಿ ಮಾಜಿ ಅಧ್ಯ ಶೇಖರ ಗೊಳಸಂಗಿ, ನೌಕರ ಸಂದ ಅಧ್ಯ ಸಿದ್ದು ಉಕ್ಕಲಿ, ಎ್​.ಡಿ ಮೇಟಿ, ಕೊಟ್ರೇಶ ಹೆಗ್ಯಾಡಾಳ, ಸಂಗಣ್ಣ ಕಲ್ಲೂರ, ಶಂಕರಗೌಡ ಬಿರಾದಾರ, ಶಂಕರಗೌಡ ಪಾಟೀಲ, ಮುತ್ತು ಡಂಬಳ, ಶ್ರೀಕಾಂತ ಪಟ್ಟಣಶೆಟ್ಟಿ, ಶ್ರೀಶೈಲ ಹೆಬ್ಬಾಳ, ಪಿಂಟು ಪಾಟೀಲ, ಬಸವರಾಜ ಅಳ್ಳಿಗಿ, ಸುರೇಶ ಹಾರಿವಾಳ, ಉಮೇಶ ಅವಟಿ, ಉಮೇಶ ಹಾರಿವಾಳ, ಸುರೇಶಗೌಡ ಪಾಟೀಲ, ರವಿ ಚಿಕ್ಕೂಂಡ, ಎಂ.ಬಿ.ತೋಟದ, ಶಾಂತು ಡಂಬಳ, ಡಾ.ಜಗದೀಶ ನಿಡಗುಂದಿ ಇತರರಿದ್ದರು.