ಬೆಳಗಾವಿ: ಪರಿಸರ ಜವಾಬ್ದಾರಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಗಣೇಶ ಚತುರ್ಥಿ ಅಂಗವಾಗಿ ಕೆಸೋರಾಮ್ ಇಂಡಸ್ಟ್ರೀಸ್ ಲಿ. ತನ್ನ ಬ್ರಾೃಂಡ್ ಬಿರ್ಲಾ ಶಕ್ತಿ ಸಿಮೆಂಟ್ ಮೂಲಕ 6,000 ಪರಿಸರ ಸ್ನೇಹಿ ಬೀಜ ಗಣೇಶನ ವಿಗ್ರಹ ವಿತರಿಸಿದೆ.
ನೈಸರ್ಗಿಕವಾಗಿ ಕರಗಲು ಮತ್ತು ಬೀಜ ಮೊಳಕೆಯೊಡೆಯಲು ರಚಿಸಲಾದ ಬೀಜ ಗಣೇಶನ ವಿಗ್ರಹಗಳು ನೆರವಾಗುತ್ತವೆ. ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭ್ಯಾಸಗಳಿಗೆ ಕೆಸೋರಾಮ್ ಇಂಡಸ್ಟ್ರೀಸ್ ಗಣೇಶ ಚತುರ್ಥಿಯನ್ನು ಆಚರಿಸಲು ಪರಿಸರ ಸ್ನೇಹಿ ಮಾರ್ಗವನ್ನು ಪ್ರೋತ್ಸಾಹಿಸುತ್ತಿದೆ.
ಈ ಪ್ರಯೋಗವು ಸುಸ್ಥಿರ ಭವಿಷ್ಯ ನಿರ್ಮಿಸುವ ಉದ್ದೇಶ ಹೊಂದಿದೆ. ವ್ಯಾಪಕ ನೆಟ್‌ವರ್ಕ್ ಮೂಲಕ ನಾವು ಪರಿಸರ ಪ್ರಜ್ಞೆಯನ್ನು ದೊಡ್ಡ ಪ್ರಮಾಣದಲ್ಲಿ ಪ್ರೋತ್ಸಾಹಿಸುತ್ತಿದ್ದೇವೆ. ಸುಸ್ಥಿರತೆಯನ್ನು ಉತ್ತೇಜಿಸುವಲ್ಲಿ ವ್ಯವಹಾರಗಳು ಮುಂದಾಳತ್ವ ವಹಿಸಬೇಕು ಎಂದು ನಾವು ನಂಬುತ್ತೇವೆ ಮತ್ತು ಬೀಜ ಗಣೇಶ ಮೂರ್ತಿಗಳು ನಾವು ಆ ಕಾರಣಕ್ಕೆ ಕೊಡುಗೆ ನೀಡುತ್ತಿರುವ ಒಂದು ಮಾರ್ಗವಾಗಿದೆ.
ಪರಿಸರ ಸ್ನೇಹಿ ಪರ್ಯಾಯಗಳನ್ನು ಅಳವಡಿಸಿಕೊಳ್ಳಲು ಮತ್ತು ಭವಿಷ್ಯದ ಪೀಳಿಗೆಗೆ ಪರಿಸರ ಸಂರಕ್ಷಿಸಲು ಕೈಜೋಡಿಸುವಂತೆ ಕೇಸೋರಾಮ್ ಇಂಡಸ್ಟ್ರೀಸ್ ಸಮೂಹ ಸಿಇಒ ಪಿ.ರಾಧಾಕಷ್ಣನ್, ಸಿಒಒ ಅಭಯ ದಾಡಿಚ್, ಮಾರುಕಟ್ಟೆ ಮುಖ್ಯಸ್ಥ ಮುದ್ದಸರ್ ಮೊಯಿನುದ್ದೀನ್ ಶೇಖ್ ವಿನಂತಿಸಿದ್ದಾರೆ.