ಚಿತ್ರದುರ್ಗ: ಜಿಲ್ಲೆಯ 6 ಮತಗಟ್ಟೆಗಳ ಸ್ಥಳ ಹಾಗೂ 34 ಮತಗಟ್ಟೆಗಳ ಹೆಸರು ಪರಿಷ್ಕರಣೆಗೆ ಭಾರತ ಚುನಾವಣಾ ಆಯೋಗ ಅನುಮೋದನೆ ನೀಡಿದೆ ಎಂ ದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು. ಡಿಸಿ ಕಚೇರಿಯಲ್ಲಿ ಬುಧವಾರ ವಿಶೇಷ ಸಂಕ್ಷಿಪ್ತ ಮತದಾರರ ಪಟ್ಟಿ ಪರಿಷ್ಕರಣೆ ಕುರಿತ ರಾಜಕೀ ಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿ,ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2025ಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ರ‌್ಯಾಷನ ಲೈಜೇಷನ್ ಆಫ್ ಪೊಲೀಂಗ್ ಸ್ಟೇಷನ್ ಪಟ್ಟಿ ಪ್ರಕಟಿಸಲಾಗಿದೆ. ಈ ಪಟ್ಟಿಯನ್ನು ಎಲ್ಲ ರಾಜಕೀಯ ಪಕ್ಷಗಳ ಏಜಂಟರ್‌ಗಳಿಗೆ ಕೊಡಲಾಗುವು ದು.
ಜಿಲ್ಲೆಯಲ್ಲಿ ಒಟ್ಟು 1661 ಮತಗಟ್ಟೆಗಳಿವೆ. ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ 285,ಚಳ್ಳಕೆರೆ-260,ಚಿತ್ರದುರ್ಗ-288,ಹಿರಿಯೂರು- 287,ಹೊಸದುರ್ಗ 242 ಹಾಗೂ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ 299 ಮತಗಟ್ಟೆಗಳಿವೆ. ಈ ಪೈಕಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ 6 ಮತಗಟ್ಟೆಗಳ ಸ್ಥಳ ಬದಲಾವಣೆ ಹಾಗೂ 34 ಮತಗಟ್ಟೆಗಳ ಹೆಸರುಗಳನ್ನು ಪರಿಷ್ಕರಿಸಿ ಪ್ರಕಟಿಸಲಾಗಿದೆ ಎಂದು ಎಡಿಸಿ ಬಿ.ಟಿ.ಕುಮಾರಸ್ವಾಮಿ ಹೇಳಿದರು. ಕಾಂಗ್ರೆಸ್ ಪಕ್ಷದ ಡಿ.ಎನ್.ಮೈಲಾರಪ್ಪ,ಜೆಡಿಎಸ್‌ನ ಡಿ.ಗೋಪಾಲಸ್ವಾಮಿನಾಯಕ ಹಾಗೂ ಸಿಪಿಐನ ಗೌಸ್‌ಪೀರ್ ಇದ್ದರು.