filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 41; 
ಜಿಲ್ಲೆ

6 ತಿಂಗಳೊಳಗೆ ದೇಗುಲ ಜೀರ್ಣೋದ್ಧಾರ ಪೂರ್ಣ

ಕೊಳ್ಳೇಗಾಲ: ತಾಲೂಕಿನ ಶಿವನಸಮುದ್ರ ಗ್ರಾಮದಲ್ಲಿರುವ ಶ್ರೀ ಮದ್ಯರಂಗನಾಥ ಸ್ವಾಮಿ ಮತ್ತು ಮಹಾಲಕ್ಷೀ ದೇವಾಲಯ ಜೀರ್ಣೋದ್ಧಾರ ಕಾಮಗಾರಿಯನ್ನು 6 ತಿಂಗಳೊಳಗೆ ಪೂರ್ಣ ಗೊಳಿಸಿ ಭಕ್ತರ ಅನುಕೂಲಕ್ಕೆ ಕಲ್ಪಿಸಲಾಗುವುದು ಎಂದು ಕಾಮಗಾರಿಗೆ ಗುರುವಾರ ಭೂಮಿ ಪೂಜೆ ನೇರವೇರಿಸಿದ ಬಳಿಕ ಹನೂರು ಶಾಸಕ ಎಂ.ಆರ್.ಮಂಜುನಾಥ್ ಭರವಸೆ ನೀಡಿದರು.

ಶ್ರೀ ಕ್ಷೇತ್ರ ಮಧ್ಯರಂಗ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಮಹಾಲಕ್ಷ್ಮೀ ಅಮ್ಮನವರ ದೇವಾಲಯ ಜೀರ್ಣೋದ್ಧಾರಕ್ಕೆ 2.40 ಕೋಟಿ ರೂ.ಅನುದಾನ ಬಿಡುಗಡೆ ಗೊಂಡಿದೆ. ಈ ಅನುದಾನದ ಪೈಕಿ ಹೈದರಾಬಾದ್ ಎಎಂಆರ್ ಇಂಡಿಯಾ ಲಿಮಿಟೆಡ್ ಕಂಪನಿಯ ಚೇರ್ಮನ್ ಎ.ಮಹೇಶ್ ಕುಮಾರ್ ರೆಡ್ಡಿ 1.20 ಕೋಟಿ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ. ಅಗತ್ಯವಿರುವ ಬಾಕಿ ಅನುದಾನವನ್ನು ಇತರೆ ಮೂಲಗಳಿಂದ ವ್ಯವಸ್ಥೆ ಮಾಡಲಾಗಿದೆ. ದೇವಾಲಯ ಆವರಣದಲ್ಲಿ ನೆಲಹಾಸು ಹಾಗೂ ಪಾಕಶಾಲೆ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲು ಸಜ್ಜಾಗುತ್ತೇವೆ ಎಂದು ಹೇಳಿದರು.

ಉಪ ವಿಭಾಗಾಧಿಕಾರಿ ಮಹೇಶ್, ಸತ್ತೇಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆಂಪರಾಜು, ಉಪಾಧ್ಯಕ್ಷರಾದ ಸುವರ್ಣಾ, ಮದ್ಯರಂಗ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್, ಹೈದರಬಾದ್‌ನ ಎಎಂಆರ್ ಇಂಡಿಯಾ ಲಿಮಿಟೆಡ್ ಚೇರ್ಮನ್ ಮಹೇಶ್ ಕುಮಾರ್ ರೆಡ್ಡಿ, ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಎಎಂಆರ್ ಇಂಡಿಯಾ ಲಿಮಿಟೆಡ್ ಕಂಪನಿಯ ಲಕ್ಷ್ಮೀ ನಾರಾಯಣ್, ಸಂಜೀವ್ ಶಿರಗುಪ್ಪಿ ಇತರರಿದ್ದರು.

ಸಾರ್ವಜನಿಕರ ಸಮಸ್ಯೆ ಆಲಿಕೆ

ದೇವಾಲಯ ಜೀರ್ಣೋದ್ಧಾರ ಕಾಮಗಾರಿ ಚಾಲನೆ ಸಂದರ್ಭದಲ್ಲಿ ಸಾರ್ವಜನಿಕರು ಶಾಸಕ ಎಂ.ಆರ್.ಮಂಜುನಾಥ್ ಹಾಗೂ ಜಿಲ್ಲಾಧಿಕಾರಿ ಶಿಲ್ಪನಾಗ್ ಅವರಿಗೆ ಮೌಖಿಕವಾಗಿ ಅಹವಾಲು ಸಲ್ಲಿಸಿದರು. ಭರಚುಕ್ಕಿ ರಸ್ತೆ ಹದಗೆಟ್ಟಿದೆ. ಪ್ರವಾಸೋದ್ಯಮಕ್ಕೆ ಹೆಸರಾಗಿರುವ ಈ ಸ್ಥಳದಲ್ಲಿ ರಸ್ತೆ ಅಭಿವೃದ್ಧಿ ಆಗಬೇಕಿದೆ ಎಂದು ಮನವಿ ಮಾಡಿದರು. ಡಿಸಿ ಶಿಲ್ಪನಾಗ್ ಪ್ರತಿಕ್ರಿಯಿಸಿ, ಶಾಸಕರು ಈಗಾಗಲೆ ರಸ್ತೆ ಅಭಿವೃದ್ಧಿ ಮಾಡುವ ಬಗ್ಗೆ ಗಮನ ಸೆಳೆದಿದ್ದಾರೆ. ಸದ್ಯದಲ್ಲಿ ರಸ್ತೆ ಅಭಿವೃದ್ಧಿ ಕಾಣಲಿದೆ ಎಂದರು.

ಅಂಗನವಾಡಿಗೆ ಸ್ಥಳ ಗುರುತಿಸಿ: ಸತ್ತೇಗಾಲ ಗ್ರಾ.ಪಂ ವ್ಯಾಪ್ತಿಯಲ್ಲಿರುವ ಬಹುತೇಕ ಅಂಗನವಾಡಿ ಕೇಂದ್ರಗಳು ಸೂಕ್ತ ಸ್ಥಳವಿಲ್ಲದೆ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ ಎಂದು ಸಾರ್ವಜನಿಕರು ಹೇಳಿದರು. ಡಿಸಿ ಪ್ರತಿಕ್ರಿಯಿಸಿ, ಇತ್ತೀಚೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿದ್ದೇವೆ. ಕೆಲವು ಕಡೆಗಳಲ್ಲಿ ಅಂಗನವಾಡಿಗೆ ಸ್ಥಳ ದೊರೆತಿದೆ ಎಂಬ ಮಾಹಿತಿ ತಿಳಿದಿದೆ. ಮಕ್ಕಳಿಗೆ ಸುರಕ್ಷತೆ ಇರುವ ಜಾಗವನ್ನು ನೀಡಬೇಕು. ಆದಷ್ಟೂ ಸರ್ಕಾರಿ ಶಾಲೆಯ ಆವರಣದಲ್ಲಿಯೇ ಅಂಗನವಾಡಿ ನಿರ್ಮಿಸಲು ತಿಳಿಸಿದ್ದೇನೆ ಎಂದರು. ಕಂದಾಯ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಂಟಿಯಾಗಿ ಕಾರ್ಯ ನಿರ್ವಹಿಸಬೇಕು. ವಿಳಂಬ ಮಾಡದೇ ಸ್ಥಳ ದೊರೆತರೆ ಪ್ರಸ್ತಾವನೆ ಸಲ್ಲಿಸಿ, 1 ತಿಂಗಳೊಳಗೆ ಕಾಮಗಾರಿ ಆರಂಭಿಸಿ ಎಂದು ಎಸಿ ಮಹೇಶ್ ಅವರಿಗೆ ತಿಳಿಸಿದರು. ಶಾಸಕರು ಮಾತನಾಡಿ, ಗ್ರಾಮಗಳಿಗೆ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಿಗರು ಬಂದರೆ ಸ್ಥಳ ಹುಡುಕಲು ಸಹಕರಿಸಿ ಎಂದು ಗ್ರಾ.ಪಂ ಅಧ್ಯಕ್ಷ ಕೆಂಪರಾಜು ಅವರಿಗೆ ತಿಳಿಸಿದರು.