ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಆನಂದ ನಗರದ ಮದಿನಿ ಮಸೀದಿ ಸೇತುವೆ ಹತ್ತಿರ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದೆ.
ನೆರೆಹೊರೆ ಮನೆಯ 6 ಜನರ ನಡುವೆ ಜಗಳವಾಗಿದ್ದು, ಪರಸ್ಪರ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ರೌಡಿಶೀಟರ್ ಹುಸೇನ್‌ಸಾಬ್ ಪಾನ್‌ವಾಲೆ, ಸಲ್ಮಾನ್ ದಿಲ್ವಾರ್ ಶೇಖ್, ಆಷ್ಪಾಕ್ ಜಾಫರ್ ಪಾನವಾಲೆ, ಮಲ್ಲಿಕ್ ದಿಲ್ವಾರ್, ಶಾನು ಜಾಫರ್‌ಸಾಬ್ ಪಾನ್‌ವಾಲೆ, ರೋಹಿಬ್ ದಿಲ್ವಾರ್ ಶೇಖ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಹಳೇ ಹುಬ್ಬಳ್ಳಿ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿವೆ.