ಜಿಲ್ಲೆ

ನಮ್ಮ ವಿರುದ್ಧ ತೇಜೋವಧೆ ನಡೆಯುತ್ತಿದೆ.. 6 ಜನ ಮಾತ್ರವಲ್ಲ, ಎಲ್ಲ ಸಚಿವರೂ ಕೋರ್ಟ್​ ಹೋಗ್ತಾರೆ...

ಬೆಂಗಳೂರು: ನಾವು ಮೈತ್ರಿ ಸರ್ಕಾರ‌ ಕೆಡವಿ ಬಿಜೆಪಿ ಸರ್ಕಾರ ರಚಿಸಿದ್ದೀವಿ ಅನ್ನೋ ಕೋಪ ಹಲವರಲ್ಲಿ ಇದೆ. ಹೀಗಾಗಿ ನಮ್ಮ ವಿರುದ್ಧ ತೇಜೋವಧೆ ಯತ್ನ ನಡೆಯುತ್ತಿದೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕರ ವಿರುದ್ಧ ಸಚಿವ ಎಸ್​.ಡಿ. ಸೋಮಶೇಖರ್ ಗಂಭೀರ ಆರೋಪ ಮಾಡಿದರು.

ತಮ್ಮ ವಿರುದ್ಧ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಮಾಡದಂತೆ ಕೋರಿ ಕೋರ್ಟ್​ ಮೆಟ್ಟಿಲೇರಿರುವ ಆರು ಸಚಿವರ ಪೈಕಿ ಸೋಮಶೇಖರ್​ ಕೂಡ ಒಬ್ಬರು. ಈ ಕುರಿತು ಶನಿವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಶೇಖರ್​, ವಿಡಿಯೋ ಪ್ರಕರಣ ನಮಗೆ ಭೀತಿ ತಂದಿಲ್ಲ. ಆ ಥರ ನಾವು ಯೋಚನೆಯನ್ನೂ ಮಾಡಿಲ್ಲ ಎಂದರು.

ಸದ್ಯಕ್ಕೆ ಆರು ಜನ ಸಚಿವರು ಸಿಕ್ಕಿದ್ರು. ನಾವೆಲ್ಲರೂ ನಮ್ಮ ವಿರುದ್ಧವಾದ ಸುದ್ದಿಯನ್ನು ಪ್ರಸಾರ ಮಾಡದಂತೆ ಕೋರಿ ಕೋರ್ಟ್​ಗೆ ಅರ್ಜಿ ಹಾಕಿದ್ದೀವಿ. ಉಳಿದ ಸಚಿವರೂ ಕೋರ್ಟ್​ಗೆ ಅರ್ಜಿ ಹಾಕುತ್ತಾರೆ. ಇಂದು ಅಥವಾ ನಾಡಿದ್ದು(ಸೋಮವಾರ) ಉಳಿದ ಸಚಿವರು ಅರ್ಜಿ ಹಾಕಲಿದ್ದಾರೆ ಎಂದಯ ಎಸ್​.ಟಿ. ಸೋಮಶೇಖರ್ ತಿಳಿಸಿದರು.

ಕೆಲ ಮಾಧ್ಯಮಗಳಲ್ಲಿ ಇರೋಬರೋದೆಲ್ಲ ಹಾಕಿ ಅವಮಾನ ಮಾಡ್ತಾರೆ. ಒಳ್ಳೇದು-ಕೆಟ್ಟದು ಅಂತ ನೋಡಲ್ಲ. ಅದಕ್ಕಾಗಿ ನಾವು ಕೋರ್ಟ್​ಗೆ ಮೊರೆ ಹೋಗಿದ್ದೀವಿ ಎಂದರು.