NO ALCOHOL sign. Wine bottle and cup icons in crossed out red circle. Vector. 
ಜಿಲ್ಲೆ

ವರ್ಷದ ಕೊನೆಯ ದಿನ 6 ಕೋಟಿ ಮೌಲ್ಯದ ಮದ್ಯ ಮಾರಾಟ

ವಿಜಯವಾಣಿ ಸುದ್ದಿಜಾಲ ಧಾರವಾಡ

ಜಿಲ್ಲೆಯ ಜನ ಹೊಸ ವರ್ಷಾಚರಣೆಯನ್ನು ಭರ್ಜರಿಯಾಗಿ ಆಚರಿಸಿದ್ದಾರೆ. 2024ರ ಕೊನೆಯ ದಿನವಾದ ಮಂಗಳವಾರ ಒಂದೇ ದಿನ ಸುಮಾರು 6 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ.

ಜಿಲ್ಲೆಯ ಎಂಎಸ್‌ಐಎಲ್ ಸೇರಿ ಖಾಸಗಿ ಮದ್ಯದ ಅಂಗಡಿಗಳು, ಬಾರ್‌ಗಗಳಿಗೆ ಅಬಕಾರಿ ಇಲಾಖೆಯಿಂದ 20,000 ಮದ್ಯದ ಬಾಕ್ಸ್ಗಳನ್ನು ಪೂರೈಸಲಾಗಿತ್ತು. ಈ ಪೈಕಿ ಅಂದಾಜು 15,000 ಬಾಕ್ಸ್ ಮಾರಾಟವಾಗಿವೆ.

ಹಾಟ್ ಡ್ರಿಂಕ್ಸ್ಗೆ ಆದ್ಯತೆ: ಅವಳಿನಗರ ಹಾಗೂ ಗ್ರಾಮೀಣ ಪ್ರದೇಶದ ಜನ ಹೊಸ ವರ್ಷದ ಮೋಜಿಗೆ ಹಾಟ್ ಡ್ರಿಂಕ್ಸ್ಗೆ ಆದ್ಯತೆ ಕೊಟ್ಟಿದ್ದಾರೆ. ವಿಸ್ಕಿ, ರಮ್, ಬ್ರಾಂಡಿ ಸೇರಿ 12,000 ಬಾಕ್ಸ್ ಮಾರಾಟವಾಗಿದೆ. ಇನ್ನು ಪೂರೈಕೆಯಾಗಿದ್ದ 8,000 ಬಿಯರ್ ಬಾಕ್ಸ್ಗಳಲ್ಲಿ ಸುಮಾರು 6,000 ಬಾಕ್ಸ್ಗಳು ಮಾರಾಟವಾಗಿವೆ. ಒಂದೇ ದಿನ ಸುಮಾರು 6 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ ಎಂದು ಜಿಲ್ಲೆಯ ಅಬಕಾರಿ ಡಿಸಿ ರಮೇಶಕುಮಾರ ಎಚ್. ತಿಳಿಸಿದ್ದಾರೆ.